ಅಮೆಜಾನ್​ ಸಿಬ್ಬಂದಿಗೂ ವಕ್ಕರಿಸಿದ ಕೊರೋನಾ ಮಹಾಮಾರಿ..!

masthmagaa.com:

ಜಗತ್ತಿನಾದ್ಯಂತ ಆತಂಕ ಹೆಚ್ಚಿಸಿರುವ ಕೊರೋನಾ ವೈರಸ್​ ಅಮೆಜಾನ್​ ಕಂಪನಿಯ ಸಿಬ್ಬಂದಿಗೂ ತಗುಲಿದೆ. ಈ ಸಂಬಂಧ ಇಂಗ್ಲಿಷ್ ಮಾಧ್ಯಮ ಸಂಸ್ಥೆಗೆ ಮಾಹಿತಿ ನೀಡಿರುವ ಅಮೆಜಾನ್, ಓರ್ವ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆತನಿಗೆ ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತಿರುವುದಾಗಿ ತಿಳಿಸಿದೆ. ಅಲ್ಲದೆ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಇತರ ಸಿಬ್ಬಂದಿಗೂ ಈ ಬಗ್ಗೆ ಎಚ್ಚರಿಸಿರುವುದಾಗಿ ಹೇಳಿದೆ.

ಅಮೆರಿಕದ ಸೀಟಲ್​ನಲ್ಲಿರುವ ಅಮೆಜಾನ್​ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಕೊರೋನಾ ವೈರಸ್​ ಪತ್ತೆಯಾಗಿದೆ. ಭಾನುವಾರ ಇಟಲಿಯ ಮಿಲನ್ ನಗರದಲ್ಲಿ ಅಮೆಜಾನ್​ ಕಂಪನಿಯ ಇಬ್ಬರು ಕೆಲಸಗಾರರಲ್ಲಿ ಮಹಾಮಾರಿ ಪತ್ತೆಯಾಗಿತ್ತು. ಸದ್ಯ ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ.

-masthmagaa.com

Contact Us for Advertisement

Leave a Reply