ಇಂಗ್ಲೆಂಡ್​ನಿಂದ ಬಂದ 8 ಮಂದಿಗೆ ಕೊರೋನಾ..! ಹೊಸ ಆತಂಕ

masthmagaa.com:

ದೆಹಲಿ: 2 ಪ್ರತ್ಯೇಕ ವಿಮಾನಗಳಲ್ಲಿ ಇಂಗ್ಲೆಂಡ್​​ನಿಂದ ಭಾರತಕ್ಕೆ ಬಂದಿದ್ದ 8 ಮಂದಿ ಪ್ರಯಾಣಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಬ್ರಿಟಿಷ್ ಏರ್​ವೇಸ್ ವಿಮಾನದಲ್ಲಿ ಭಾರತಕ್ಕೆ ಬಂದಿದ್ದರು. ಹೊಸ ಕೊರೋನಾ ವೈರಸ್ ಹಾವಳಿ ಶುರುವಾಗಿರುವ ಹೊತ್ತಲ್ಲೇ ಈ ಬೆಳವಣಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಇಂಗ್ಲೆಂಡ್​ನಿಂದ ಬರುವ ವಿಮಾನಗಳ ಮೇಲೆ ವಿವಿಧ ದೇಶಗಳು ನಿರ್ಬಂಧ ಹೇರಿದ್ದು, ಭಾರತ ಕೂಡ ಈ ದೇಶಗಳ ಪಟ್ಟಿಯಲ್ಲಿದೆ. ಆದ್ರೆ ಭಾರತ ಹೇರಿರುವ ನಿರ್ಬಂಧ ನಾಳೆಯಿಂದ ಜಾರಿಗೆ ಬರಲಿದ್ದು, ಡಿಸೆಂಬರ್ 31ರವರೆಗೆ ಅನ್ವಯವಾಗಲಿದೆ. ನಿನ್ನೆ ಏರ್​ ಇಂಡಿಯಾ ವಿಮಾನದಲ್ಲಿ ಇಂಗ್ಲೆಂಡ್​​ನಿಂದ ಬಂದಿದ್ದ 266 ಮಂದಿ ಪ್ರಯಾಣಿಕರ ಪೈಕಿ 6 ಮಂದಿಯಲ್ಲಿ ಕೊರೋನಾ ಪತ್ತೆಯಾಗಿತ್ತು.

-masthmagaa.com

Contact Us for Advertisement

Leave a Reply