ನೆಹರೂ ತಪ್ಪಿನಿಂದ ಪಿಒಕೆ ಸೃಷ್ಟಿ..!: ಅಮಿತ್ ಶಾ ವಾಗ್ದಾಳಿ

ಮಹಾರಾಷ್ಟ್ರದಲ್ಲಿಂದು ಗೃಹಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ್ದಾರೆ. ಮುಂಬೈನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 370ನೇ ವಿಧಿ ಮತ್ತು ಆರ್ಟಿಕಲ್ 35ಎ ದೇಶದ ಏಕತೆಗೆ ಅಡ್ಡಿಯುಂಟು ಮಾಡಿತ್ತು. ಇದನ್ನು ಜಾರಿಗೆ ತಂದಾಗ ಜನಸಂಘ, ನಂತರದಲ್ಲಿ ಬಿಜೆಪಿ ವಿರೋಧ ಮಾಡಿಕೊಂಡೇ ಬಂದಿದೆ. ಸಂವಿಧಾನದ 370ನೇ ವಿಧಿ ದೇಶವನ್ನು ಕಾಶ್ಮೀರದ ಜೊತೆ ಜೋಡಿಸುವಲ್ಲಿ ಅಡ್ಡಿಯಾಗಿತ್ತು. ಈ ಅಡ್ಡಿಯನ್ನು ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕಿತ್ತು ಎಸೆದಿದೆ ಅಂದ್ರು. ಅಲ್ಲದೆ ಇವತ್ತು ಇಡೀ ದೇಶದ ಜನ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಬೇಕೆಂದು ಬಯಸುತ್ತಿದ್ದಾರೆ. ನೆಹರೂ ಅವರ ತಪ್ಪಿನಿಂದಾಗಿ ಪಿಒಕೆ ಅಂದ್ರೆ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯ್ತು ಅಂದ್ರು. ಈಗಲೂ ಕಂಗ್ರೆಸ್ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರೋ 370ನೇ ವಿಧಿ ರದ್ದತಿಗೆ ಅಡ್ಡಿಪಡಿಸುತ್ತಿದೆ ಅಂದ್ರು.

Contact Us for Advertisement

Leave a Reply