ಲಾಭಕ್ಕಿಂತ ಹಲವು ಪಟ್ಟು ಹೆಚ್ಚಿನ ಹಣ ಡೊನೇಟ್‌ ಮಾಡಿವೆ ಕಂಪನಿಗಳು!

masthmagaa.com:

ಚುನಾವಣಾ ಬಾಂಡ್‌ಗಳ ಲಿಸ್ಟನ್ನ ವಿಶ್ಲೇಷಣೆ ಮಾಡಿದಷ್ಟು ಆಶ್ಚರ್ಯಕರ ವಿಚಾರಗಳು ಹೊರ ಬರ್ತಾಇವೆ. ಈಗ ಬಿಜೆಪಿ, ಟಿಎಂಸಿ ಹಾಗೂ ಕಾಂಗ್ರೆಸ್‌ಗಳಿಗೆ ದೇಣಿಗೆ ಕೊಟ್ಟಿರೋ ಟಾಪ್‌ ಡೋನರ್‌ಗಳ ಪೈಕಿ, 8 ಕಂಪನಿಗಳು ಲಿಸ್ಟಿಂಗ್‌ ಆಗಿಲ್ಲ. ಅಂದ್ರೆ ಅವು ಸ್ಟಾಕ್‌ ಮಾರ್ಕೆಟ್‌ನಲ್ಲಿಲ್ಲ. ಅದ್ರ ಜೊತೆಗೆ, ಈ ಕಂಪನಿಗಳು ತಾವು ಲಾಭ ಗಳಿಸಿರೋದಕ್ಕಿಂತ ಹಲವು ಪಟ್ಟು ಹಣವನ್ನ ಪಕ್ಷಗಳಿಗೆ ಡೊನೇಟ್‌ ಮಾಡಿವೆ. ಅತಿ ದೊಡ್ಡ ಡೋನರ್‌, ₹1,368 ಕೋಟಿ ಡೊನೇಟ್‌ ಮಾಡಿರೋ ಲಾಟರಿ ಕಂಪನಿ ಫ್ಯೂಚರ್‌ ಗೇಮಿಂಗ್‌ನ ಸಂಚಿತ ಲಾಭ ₹264 ಕೋಟಿ. ಇನ್ನುಳಿದ ಕಂಪನಿಗಳ ಲಿಸ್ಟ್‌ ಈ ರೀತಿ ಇದೆ ನೋಡಿ. ಇದ್ರಲ್ಲಿ ನಾಲ್ಕು ಕಂಪನಿಗಳು ನಷ್ಟದಲ್ಲಿವೆ. ಆದ್ರೂ ಕೂಡ ನಷ್ಟಕ್ಕಿಂತ ಜಾಸ್ತಿ ಹಣವನ್ನ ಡೊನೇಟ್‌ ಮಾಡಿವೆ. ತಮಗಿಲ್ಲ ಅಂದ್ರು ಸಾಲ ಸೋಲ ಮಾಡಿ ಪಕ್ಷಗಳಿಗೆ ಡೊನೇಟ್‌ ಮಾಡಿವೆ.

-masthmagaa.com

Contact Us for Advertisement

Leave a Reply