ಆರ್ಯನ್‌ ಖಾನ್‌ ಜೊತೆ ಚಾಟಿಂಗ್‌.. ನಟಿ ಅನನ್ಯ ಪಾಂಡೆಗೆ NCB ಗ್ರಿಲ್‌

masthmagaa.com:

ಆರ್ಯನ್​ ಖಾನ್​ ಬೆನ್ನಲ್ಲೇ ಬಾಲಿವುಡ್​ ನಟಿ ಅನನ್ಯ ಪಾಂಡೆ ಮುಂಬೈ ಮನೆ ಮೇಲೆ ಇವತ್ತು ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು. ಈ ವೇಳೆ ನಟಿಯ ಮೊಬೈಲ್ ಮತ್ತು ಲ್ಯಾಪ್​ಟಾಪ್​ ಅನ್ನ ಸೀಜ್ ಮಾಡಲಾಗಿದೆ ಅಂತ ವರದಿಯಾಗಿದೆ. ದಾಳಿ ಬಳಿಕ ಇವತ್ತೇ ವಿಚಾರಣೆಗೆ ಬರುವಂತೆ ಸಮನ್ಸ್​​ ಕೊಡಲಾಯ್ತು. ಅದರಂತೆ ಅನನ್ಯ ಪಾಂಡೆ ಎನ್​ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿ ವಾಪಸ್​ ಆದ್ರು. ನಾಳೆ 11 ಗಂಟೆಗೆ ಮತ್ತೆ ಅವರನ್ನ ವಿಚಾರಣೆಗೆ ಕರೆಯಲಾಗಿದೆ. ಶಾರುಖ್​ ಪುತ್ರನ ವಾಟ್ಸಾಪ್​ ಚಾಟ್​​ನಲ್ಲಿ ಅನನ್ಯ ಪಾಂಡೆ ಹೆಸರು ಕಾಣಿಸಿರೋ ಬೆನ್ನಲ್ಲೇ ನಟಿಯನ್ನ ವಿಚಾರಣೆ ನಡೆಸಿದ್ದಾರೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply