ವಿದ್ಯುತ್ ಘಟಕಕ್ಕೆ ಮೊಸಳೆ ತಂದು ಬಿಟ್ಟ ರೈತರು! ಕಾರಣವೇನು?

masthmagaa.com:

ಹೊಲಗಳಲ್ಲಿ ನೀರು ಹರಿಸಲು ಸರಿಯಾದ ಟೈಮ್‌ಗೆ ಕರೆಂಟ್‌ ಕೊಟ್ಟಿಲ್ಲ ಅಂತ ವಿದ್ಯುತ್‌ ವಿತರಣಾ ಘಟಕಕ್ಕೆ ರೈತರು ಮೊಸಳೆ ತಂದು ಬಿಟ್ಟಿರೋ ಘಟನೆ ವಿಜಯಪುರದಲ್ಲಿ ನಡೆದಿದೆ. ಕಚೇರಿಯ ಆವರಣದಲ್ಲಿ ರೈತರು ತಂದು ಬಿಟ್ಟ ಮೊಸಳೆ ಕಂಡು ವಿದ್ಯುತ್‌ ಘಟಕದ ಸಿಬ್ಬಂದಿ ಶಾಕ್‌ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ ವಿದ್ಯುತ್‌ ಕೊರತೆ ಎದುರಾಗಿದೆ. ಇನ್ನು ರೈತರು ಹೊಲಗಳಿಗೆ ನೀರು ಹರಿಸಲು ರಾತ್ರಿ ವೇಳೆಯಲ್ಲಿ ಮಾತ್ರ ವಿದ್ಯುತ್‌ ನೀಡಲಾಗುತ್ತಿದೆ. ಆದ್ರೆ ಕತ್ತಲೆಯಲ್ಲಿ ಹೊಲಗಳಿಗೆ ಹೋಗಿ ನೀರುಣಿಸುವುದು ಹೇಗೆ? ಕತ್ತಲಲ್ಲಿ ಜಲಚರ ಪ್ರಾಣಿಗಳಿಂದ ತೊಂದರೆ ಇದೆ ಅಂದ್ರೂ ಅಧಿಕಾರಿಗಳು ಕೇಳುತ್ತಿರಲಿಲ್ಲ. ಹೀಗಾಗಿ, ಬೇಸರಗೊಂಡ ರೈತರು ವಿದ್ಯುತ್‌ ವಿತರಣಾ ಘಟಕಕ್ಕೆ ಲಾರಿಯಲ್ಲಿ ಮೊಸಳೆ ಹಿಡಿದು ತಂದು ಬಿಟ್ಟಿದ್ದಾರೆ. ನಮ್ಮ ಸಮಸ್ಯೆ ಅಧಿಕಾರಿಗಳಿಗೆ ಅರ್ಥವಾಗಲಿ ಅಂತ ಮೊಸಳೆ ತಂದಿದ್ದೇವೆ ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ರಾತ್ರಿ ಪಾಳಿಯಲ್ಲಿ ನೀರು ಉಣಿಸುವಾಗ ರೈತರೊಬ್ಬರ ಹೊಲದಲ್ಲಿ ಸಿಕ್ಕ ಮೊಸಳೆಯನ್ನೇ ತಂದಿರೋದಾಗಿ ರೈತರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply