ನಿಗೂಢ ಸ್ಟೀಲ್​ ಕಂಬಗಳನ್ನ ಭೂಮಿಗೆ ಹೊತ್ತು ತರುತ್ತಿವೆಯಾ ಏಲಿಯನ್ಸ್​?

masthmagaa.com:

ಇಷ್ಟು ದಿನ ಜಗತ್ತಲ್ಲಿ ಕೊರೋನಾ ಸುದ್ದಿಯಾಗ್ತಿತ್ತು. ಆ ದೇಶಕ್ಕೂ ಹರಡ್ತು.. ಈ ದೇಶಕ್ಕೂ ಹರಡ್ತು ಅಂತ ಹೇಳ್ತಿದ್ವಿ.. ಆದ್ರೀಗ ಹೊಸದಾಗಿ ಒಂದು ಸುದ್ದಿ ಬರ್ತಾ ಇದೆ. ಅದೇ ಮೊನೋಲಿತ್​​ಗಳ ಬಗ್ಗೆ.. ಸಾಮಾನ್ಯವಾಗಿ ಕಲ್ಲಿನ ಕಂಬಕ್ಕೆ ಮೊನೋಲಿತ್ ಅಂತಾರೆ. ಆದ್ರೆ ವಿಚಿತ್ರ ರೀತಿಯಲ್ಲಿ ಜಗತ್ತಿನ ಒಂದೊಂದೇ ದೇಶದಲ್ಲಿ ಈ ರೀತಿಯ ಸ್ಟೀಲ್ ಕಂಬ ಅಥವಾ ಮೊನೋಲಿತ್ ಪತ್ತೆಯಾಗ್ತಿದೆ. ನವೆಂಬರ್ 18ರಂದು ಮೊದಲಿಗೆ ಅಮೆರಿಕದ ಉಟ್ಹಾದಲ್ಲಿ 11 ಅಡಿಯ ಕಂಬ ಪತ್ತೆಯಾಗಿತ್ತು. ಇದಾಗಿ 10 ದಿನಕ್ಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಡಿಸೆಂಬರ್ 1ರಂದು ಯೂಟ್ಯೂಬ್​​ಗೆ ವಿಡಿಯೋ ಅಪ್​ಲೋಡ್ ಮಾಡಿದ ವ್ಯಕ್ತಿಯೊಬ್ಬ ಮೊನೋಲಿತ್ ನಾನೇ ತೆಗೆದಿದ್ದು ಅಂತ ಹೇಳಿಕೊಂಡಿದ್ದ. ಇದಾದ ಬಳಿಕ ನವೆಂಬರ್ 26ರಂದು ರೊಮೇನಿಯಾ, ಡಿಸೆಂಬರ್ 2ರಂದು ಕ್ಯಾಲಿಫೋರ್ನಿಯಾದಲ್ಲಿ, ಡಿಸೆಂಬರ್​ 3ರಂದು ಪೆನ್ಸಿಲ್ವೇನಿಯಾದಲ್ಲಿ ಮೊನೋಲಿತ್ ಪತ್ತೆಯಾಗಿದೆ. ಇದೀಗ ಪೋಲೆಂಡ್​ನಲ್ಲೂ ಮೊನೋಲಿತ್​ ಪತ್ತೆಯಾಗಿದೆ.. ನೆಟ್ಟಿಗರಂತೂ ಇದೆಲ್ಲಾ ಏಲಿಯನ್​​ಗಳ ಕೈವಾಡ ಅಂತ ಹೊಸ ಹೊಸ ಥಿಯರಿಗಳನ್ನ ಮುಂದಿಡೋಕೆ ಶುರು ಮಾಡಿದ್ದಾರೆ. ಹಾಗಾದ್ರೆ ಈ ಸ್ಟೀಲ್ ಕಂಬಗಳನ್ನು ತಂದು ಇಡ್ತಿರೋರು ಯಾರು..? ಸ್ವಲ್ಪ ದಿನ ಆದ್ಮೇಲೆ ಅದನ್ನ ತೆಗೆದುಕೊಂಡು ಹೋಗ್ತಿರೋದು ಯಾರು..? ತೆಗೆದುಕೊಂಡು ಹೋಗೋದು ಯಾರಿಗೂ ಗೊತ್ತಾಗ್ತಿಲ್ಲ ಯಾಕೆ..? ಅದೂ ಅಲ್ಲದೆ ಆ ಸ್ಟೀಲ್ ಕಂಬದ ವಿಡಿಯೋದಲ್ಲಿ ಸ್ಕ್ರೂ ಕೂಡ ಇದೆ.. ಈ ಮಿಸ್ಟ್ರಿ ಇನ್ನೂ ಮಿಸ್ಟ್ರಿಯಾಗಿಯೇ ಉಳಿದಿದೆ.

-masthmagaa.com

Contact Us for Advertisement

Leave a Reply