ಸಮೀರ್ ವಾಂಖೆಡೆ ವಿರುದ್ಧ ನವಾಬ್ ಮಲಿಕ್ ಹೊಸ ಬಾಂಬ್! ಏನು ಗೊತ್ತಾ?

masthmagaa.com:

ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಕೇಸ್​ನ ಪ್ರಮುಖ ವಿಚಾರಣಾಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಸಚಿವ ತಮ್ಮ ಮಾತಿನ ದಾಳಿ ಮುಂದುವರಿಸಿದ್ದಾರೆ. ಮಾದಕ ವಸ್ತು ಪೂರೈಸೋ ಸಲ್ಮಾನ್ ಮತ್ತು ಸಮೀರ್ ವಾಂಖೆಡೆ ಸಹೋದರಿ ಯಾಸ್ಮೀನ್ ವಾಂಖೆಡೆಗೂ ಲಿಂಕ್ ಇದೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ ಅಂತ ಯಾಸ್ಮೀನ್ ಮತ್ತು ಅನ್​ನೌನ್​​ ಫೋಣ್ ನಂಬರ್ ನಡುವೆ ನಡೆದ ವಾಟ್ಸಾಪ್ ಚಾಟ್ ಶೇರ್ ಮಾಡಿದ್ದಾರೆ. ಜೊತೆಗೆ ಸಮೀರ್ ವಾಂಖೆಡೆ ದುಬಾರಿ ಜೀವನ ಶೈಲಿ ಬಗ್ಗೆಯೂ ಆರೋಪ ಮಾಡಿದ್ದಾರೆ. ಸಮೀರ್ 50, 30 ಸಾವಿರ ರೂಪಾಯಿಯ ಟಿ ಶರ್ಟ್​​ ಧರಿಸ್ತಾರೆ. 20 ಲಕ್ಷ ರೂಪಾಯಿಯ ವಾಚ್, 2 ಲಕ್ಷದ ಶೂ ಧರಿಸ್ತಾರೆ. ಓರ್ವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಇಷ್ಟೆಲ್ಲಾ ದುಬಾರಿ ಜೀವನ ಶೈಲಿ ಅಳವಡಿಸಿಕೊಳ್ಳಲು ಹೇಗೆ ಸಾಧ್ಯ ಅಂತ ಪ್ರಶ್ನಿಸಿದ್ದಾರೆ.

ನನಗೆ ಸಿಕ್ಕಿರೋ ಮಾಹಿತಿ ಪ್ರಕಾರ ಸಮೀರ್ ವಾಂಖೆಡೆ ಇಲಾಖೆ ಸೇರುತ್ತಿದ್ದಂತೆ ಒಂದು ಖಾಸಗಿ ಆರ್ಮಿ ಕಟ್ಕೊಂಡಿದ್ದಾರೆ. ಅದ್ರಲ್ಲಿರೋರು ಇಡೀ ನಗರದಲ್ಲಿ ಮಾದಕ ದಂಧೆ ನಡೆಸ್ತಾರೆ. ಸಣ್ಣ ಸಣ್ಣ ಪ್ರಕರಣಗಳನ್ನು ದೊಡ್ಡದು ಮಾಡಲಾಗುತ್ತೆ. ದೊಡ್ಡದು ಯಾವುದೇ ತಡೆಯಿಲ್ಲದೇ ಮುಂದುವರಿಯುತ್ತೆ ಅಂತ ಹೇಳಿದ್ದಾರೆ.

ಇನ್ನು ನವಾಬ್ ಮಲಿಕ್ ಮಾಡಿರೋ ಆರೋಪಗಳಿಗೆ ಸಮೀರ್ ವಾಂಖೆಡೆ ಉತ್ತರ ನೀಡಿದ್ದಾರೆ. ನನ್ನ ಮತ್ತು ನಮ್ಮ ಕುಟುಂಬವನ್ನು ಸಿಕ್ಕಿಹಾಕಿಸೋ ಪ್ರಯತ್ನ ಮೊದಲಿಂದಲೂ ನಡೆದಿದೆ. ಈ ಹಿಂದೆ ಸಲ್ಮಾನ್ ಅನ್ನೋ ಮಾದಕ ವಸ್ತು ಪೂರೈಸೋ ವ್ಯಕ್ತಿ ಲಾಯರ್ ಆಗಿರೋ ನನ್ನ ಸಹೋದರಿ ಯಾಸ್ಮೀನ್ ವಾಂಖೆಡೆ ಬಳಿ ಬಂದಿದ್ರು. ಆದ್ರೆ ಸಲ್ಮಾನ್ ವಿರುದ್ಧ ಎನ್​​ಡಿಪಿಎಸ್​ ಕೇಸ್ ದಾಖಲಾಗಿದ್ದರಿಂದ ಆ ಕೇಸ್​​ ನನ್ನ ಸಹೋದರಿ ಯಾಸ್ಮೀನ್ ವಾಂಖೆಡೆ ಸ್ವೀಕರಿಸಲಿಲ್ಲ. ಈಗ ಸಲ್ಮಾನ್ ಅರೆಸ್ಟ್ ಆಗಿ ಜೈಲಿನಲ್ಲಿದ್ದಾನೆ. ಈ ರೀತಿ ನಮ್ಮ ಕುಟುಂಬವನ್ನು ಸಿಲುಕಿಸಲು ಸಲ್ಮಾನ್​ನಂತ ಮಾದಕ ವಸ್ತು ಪೂರೈಕೆದಾರರನ್ನು ಕೂಡ ಬಳಸಿಕೊಳ್ಳಲಾಗಿದೆ ಅಂತ ಸಮೀರ್ ವಾಂಖೆಡೆ ಹೇಳಿದ್ದಾರೆ. ಈ ನಡುವೆ ದುಬಾರಿ ಜೀವನ ಶೈಲಿ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ಇದೆಲ್ಲಾ ಸುಳ್ಳು.. ನವಾಬ್ ಮಲಿಕ್​ಗೆ ಈ ಬಗ್ಗೆ ಜ್ಞಾನ ಇಲ್ಲ.. ಲೋಖಂಡ್​​ವಾಲಾಗೆ ಹೋದ್ರೆ ಎಲ್ಲಾ ಬ್ರಾಂಡ್ ಬಟ್ಟೆ ಸಿಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply