ನಮ್ಮ ಮಿತ್ರ ಬೆಲರೂಸ್‌ ತಂಟೆಗೆ ಬಂದ್ರೆ ಸರಿಯಿರಲ್ಲ ಹುಷಾರ್‌: ಪುಟಿನ್‌

masthmagaa.com:

ರಷ್ಯಾದ ಮಿತ್ರರಾಷ್ಟ್ರ ಬೆಲರೂಸ್‌ ವಿರುದ್ಧದ ಯಾವುದೇ ಆಕ್ರಮಣವನ್ನ ರಷ್ಯಾ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತೆ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಸಿದ್ದಾರೆ. ಇತ್ತೀಚೆಗೆ ರಷ್ಯಾದ ಖಾಸಗಿ ಸೇನೆ ವ್ಯಾಗ್ನರ್‌ ಗ್ರೂಪ್‌ ಬೆಲರೂಸ್‌ಗೆ ತೆರಳಿದೆ ಅಂತ ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ಪೂರ್ವ ಪೊಲ್ಯಾಂಡ್‌ನಲ್ಲಿ ಸೇನಾ ಘಟಕವನ್ನ ನಿಯೋಜಿಸಲಾಗುತ್ತೆ ಅಂತ ಪೊಲ್ಯಾಂಡ್‌ನ ಸೆಕ್ಯುರಿಟಿ ಕಮಿಟಿ ನಿರ್ಧಾರ ಮಾಡಿದೆ ಅಂತ ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪುಟಿನ್‌, ಪಶ್ಚಿಮ ಪೊಲ್ಯಾಂಡ್‌ನ್ನ ಸೋವಿಯತ್‌ ರಷ್ಯಾದ ನಾಯಕ ಜೋಸೆಫ್‌ ಸ್ಟಾಲಿನ್‌ ಅವ್ರು ಕೊಟ್ಟಿದ್ರು ಅನ್ನೋದನ್ನ ಪೊಲ್ಯಾಂಡ್‌ಗೆ ನೆನಪಿಸೋಕೆ ಇಷ್ಟಪಡ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ಬೆಲರೂಸ್‌ ವಿರುದ್ಧ ಆಕ್ರಮಣಕ್ಕೆ ರಷ್ಯಾ ತಕ್ಕ ಪ್ರತಿಕ್ರಿಯೆ ನೀಡಲಿದೆ ಅಂತ ಹೇಳಿದ್ದಾರೆ. ಈ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಪೊಲ್ಯಾಂಡ್‌ ಪ್ರಧಾನಿ ಮಟೇಸ್ಝ್‌ ಮೊರಾವಿಯಾಸ್ಕಿ(Mateusz Morawiecki), ಸ್ಟಾಲಿನ್‌ ಒಬ್ಬ ಯುದ್ಧ ಅಪರಾಧಿಯಾಗಿದ್ದು, ಸಾವಿರಾರು ಪೊಲ್ಯಾಂಡ್‌ ಪ್ರಜೆಗಳ ಸಾವಿಗೆ ಕಾರಣವಾಗಿದ್ದ. ಹೀಗಾಗಿ ಐತಿಹಾಸಿಕ ಸತ್ಯಗಳ ಮೇಲೆ ಚರ್ಚೆ ನಡೆಸುವ ಅಗತ್ಯವಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಪೊಲ್ಯಾಂಡ್‌ನಲ್ಲಿರುವ ರಷ್ಯಾ ರಾಯಭಾರಿಗೆ ಸಮನ್ಸ್‌ ನೀಡಲಾಗುವುದು ಅಂತ ತಿಳಿಸಿದ್ದಾರೆ. ಅಂದ್ಹಾಗೆ ಮೊದಲನೇ ಮಹಾಯುದ್ದಕ್ಕೂ ಮುಂಚೆ ಪೊಲ್ಯಾಂಡ್‌ ಸ್ವತಂತ್ರ ದೇಶವಾಗಿರ್ಲಿಲ್ಲ ರಷ್ಯ, ಜರ್ಮನಿ ಮತ್ತು ಆಸ್ಟ್ರೋ-ಹಂಗರಿ ಸಾಮ್ರಾಜ್ಯಗಳು, ಇದ್ರ ಭಾಗಗಳನ್ನ ಕಂಟ್ರೋಲ್‌ ಮಾಡ್ತಿದ್ವು. ಯುದ್ಧ ಮುಗಿದ್ಮೇಲೆ ಪೊಲ್ಯಾಂಡ್‌ ಸೃಷ್ಟಿಯಾಯ್ತು. ಆದ್ರೆ ಎರಡನೇ ಮಹಾಯುದ್ಧ ಶುರುವಾದ ತಕ್ಷಣ ಜರ್ಮನಿ ಹಾಗು ಸೋವಿಯತ್‌ ರಷ್ಯಾ ಒಬ್ಬರಿಗೊಬ್ಬರ ಮೇಲೆ ದಾಳಿ ಮಾಡಲ್ಲ, ಜೊತೆಗೆ ಪೊಲ್ಯಾಂಡ್‌ ಮೇಲೆ ಕೂಡ ದಾಳಿ ಮಾಡಲ್ಲ ಅಂತ ಒಪ್ಪಂದ ಮಾಡ್ಕೊಂಡಿದ್ವು. ಆದ್ರೆ 1939ರ ಸೆಪ್ಟಂಬರ್‌ 1ರಂದು ಅಂದ್ರೆ ಒಪ್ಪಂದ ಆಗಿ ಒಂದೇ ವಾರದಲ್ಲಿ ನಾಜಿ ಜರ್ಮನಿ ಪೊಲ್ಯಾಂಡ್‌ ಮೇಲೆ ದಾಳಿ ಮಾಡ್ತು.ಇದ್ರ ಬೆನ್ನಲ್ಲೇ ಸೋವಿಯತ್‌ ಕೂಡ ಪೊಲ್ಯಾಂಡ್‌ಗೆ ನುಗ್ತು. ನಂತ್ರ ಈ ಹಿಂದಿನ ಒಪ್ಪಂದಂತೆ ಪೊಲ್ಯಾಂಡ್‌ನ್ನ ಎರಡು ಭಾಗವಾಗಿ ಮಾಡಲಾಗಿತ್ತು. ವೆಸ್ಟ್‌ ಪೊಲ್ಯಾಂಡ್‌ ಅಂತ ಕರೆಯಲಾಗ್ತಿದ್ದ ಪೂರ್ವ ಪೊಲ್ಯಾಂಡ್‌ ಸೋವಿಯತ್‌ ಒಕ್ಕೂಟದ ಪ್ರಭಾವದಲ್ಲಿ ಇತ್ತು. ಉಳಿದದ್ದು ಜರ್ಮನಿ ಹಿಡಿತದಲ್ಲಿತ್ತು. ಕೊನೆಗೆ 1945ರಲ್ಲಿ ಜರ್ಮನಿ ಸೋತಾಗ ಮತ್ತೆ ಈ ಭಾಗಗಳನ್ನ ಒಂದುಗೂಡಿಸಿ ಪೊಲ್ಯಾಂಡ್‌ಗೆ ಕೊಡಲಾಯ್ತು.

-masthmagaa.com

Contact Us for Advertisement

Leave a Reply