ದೆಹಲಿಯಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತ್ಯಕ್ಷ: ಫೋಟೋ ಹಂಚಿಕೊಂಡ ಸೋನಂ ಕಪೂರ್!

masthmagaa.com:

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಪಂದ್ಯದಲ್ಲಿ ಆಪಲ್ ಸಿಇಒ ಟಿಮ್ ಕುಕ್ ಭಾಗವಹಿಸಿದ್ರು. ಬಾಲಿವುಡ್‌ ನಟಿ ಸೋನಂ ಕಪೂರ್ ಮತ್ತು ಅವರ ಪತಿ, ಉದ್ಯಮಿ ಆನಂದ್ ಅಹುಜಾ ಅವರೊಂದಗಿನ ಫೋಟೊದಲ್ಲಿ ಟಿಮ್‌ ಕುಕ್‌ ಕಾಣಿಸಿಕೊಂಡಿದ್ದಾರೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಅವರೊಂದಿಗೆ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೊವನ್ನ ಸೋನಂ ಕಪೂರ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ದೇಶದ ಮೊದಲ ಆಪಲ್ ಸ್ಟೋರ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಟಿಮ್ ಕುಕ್ ಭಾರತಕ್ಕೆ ಬಂದಿದ್ದರು. ಆಪಲ್‌ ಸ್ಟೋರ್‌ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‌ನ ಹಲವಾರು ಕಲಾವಿದರು ಭಾಗಹಿಸಿದ್ದರು.
ಮುಂಬೈನಲ್ಲಿ ಸಮಯ ಕಳೆದ ನಂತರ, ಟಿಮ್‌ ಕುಕ್‌ ಈಗ ಸಾಕೇತ್‌ನಲ್ಲಿ ಮತ್ತೊಂದು ಆಪಲ್ ಸ್ಟೋರ್ ತೆರೆಯಲು ದೆಹಲಿಗೆ ಹೋಗಿದ್ದಾರೆ.

-masthmagaa.com

Contact Us for Advertisement

Leave a Reply