ರಾಜ್ಯದ ಹೊಸ ಸಿಎಂ ಯಾರು? ಹೈಕಮಾಂಡ್​ನಿಂದ ಶಾರ್ಟ್​​ ಲಿಸ್ಟ್​ ರೆಡಿ

masthmagaa.com:

ರಾಜ್ಯದಲ್ಲಿ ಸಿಎಂ ಬಲದಾವಣೆಯ ಸದ್ದು ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಈ ನಡುವೆ ಪ್ರಭಾವಿ ಲಿಂಗಾಯತ ನಾಯಕ, ಸಿಎಂ ಯಡಿಯೂರಪ್ಪರ ಜಾಗಕ್ಕೆ ಬಿಜೆಪಿ ಹೈಕಮಾಂಡ್ ಒಂದು ಲಿಸ್ಟ್ ರೆಡಿ ಮಾಡಿದೆ. ಅವರೆಲ್ಲೇ ಯಾರಾದ್ರೂ ಒಬ್ಬರನ್ನು ಆಯ್ಕೆ ಮಾಡ್ಬೋದು ಅಂತ ಮೂಲಗಳು ತಿಳಿಸಿವೆ. ಅವರು ಯಾರು ಅಂತ ನೋಡೋದಾದ್ರೆ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್​ ಇದಾರೆ. ಇವರು ಉದ್ಯಮಿ ಮತ್ತು ಇಂಜಿನಿಯರ್ ಕೂಡ ಹೌದು.. ಕ್ಲೀನ್ ಇಮೇಜ್ ಇರೋ, ಲೋ ಪ್ರೊಫೈಲ್ ರಾಜಕಾರಣಿಯಾಗಿದ್ದಾರೆ. ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲಿಸ್ಟ್​​ನಲ್ಲಿದ್ದಾರೆ. ಆರ್​ಎಸ್​​ಎಸ್​ ಹಿನ್ನೆಲೆ ಹೊಂದಿರೋ ಇವರು ಕೇಂದ್ರ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗದ ಸ್ಥಾನಮಾನ ನೀಡಬೇಕೆಂದು ನಡೆಸಿದ ಹೋರಾಟದಲ್ಲಿ ಇವರು ಮುಂಚೂಣಿಯಲ್ಲಿದ್ರು. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಲ್ಲೊಬ್ಬರಾದ ಯತ್ನಾಳ್​, ಮೋದಿ ಆಯ್ಕೆ ಅಂತ ಕೂಡ ಸುದ್ದಿಯಾಗ್ತಿದೆ. ಬಾಗಲಕೋಟೆಯ ಬೀಳಗಿಯಿಂದ 3 ಸಲ ಗೆದ್ದಿರೋ ಮುರುಗೇಶ್ ನಿರಾಣಿ ಕೂಡ ಲಿಸ್ಟ್​ನಲ್ಲಿದ್ದಾರೆ. ಇವರು ಸದ್ಯ ರಾಜ್ಯ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಖಾತೆಯ ಸಚಿವರೂ ಆಗಿದ್ದಾರೆ. ಅಮಿತ್ ಶಾ ಜೊತೆ ಇವರು ಸ್ವಲ್ಪ ಕ್ಲೋಸ್ ಆಗಿದ್ದಾರೆ. ಇನ್ನು ಬಸವರಾಜ್ ಬೊಮ್ಮಾಯಿ ಕೂಡ ಬಿಜೆಪಿ ಹೈಕಮಾಂಡ್ ಲಿಸ್ಟ್​ನಲ್ಲಿ ಜಾಗ ಪಡ್ಕೊಂಡಿದ್ದಾರೆ. ಒಂದ್ವೇಳೆ ಯಡಿಯೂರಪ್ಪರ ಸಲಹೆ ಕೇಳಿ ಹೈಕಮಾಂಡ್ ನಿರ್ಧಾರ ತಗೊಂಡ್ರೆ ಬಸವರಾಜ್ ಬೊಮ್ಮಾಯಿ ಸಿಎಂ ಆಗೋದು ಪಕ್ಕ.. ಇವಿಷ್ಟು ಮಂದಿ ಪಂಚಮಸಾಲಿ ಸಮುದಾಯದ ಸಂಭಾವಿತ ಅಭ್ಯರ್ಥಿಗಳು. ಇನ್ನು ಲಿಂಗಾಯತರನ್ನು ಹೊರತುಪಡಿಸಿದ್ರೆ ಪ್ರಹ್ಲಾದ್ ಜೋಶಿ ಮತ್ತು ಸಿಟಿ ರವಿ ಕೂಡ ರೇಸ್​ನಲ್ಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಆಡಿಯೋ ಲೀಕ್ ಗಣನೆಗೆ ತೆಗೆದುಕೊಂಡ್ರೆ ಜೋಶಿಯೇ ಆ ಲಿಸ್ಟ್​ನಲ್ಲಿ ಟಾಪ್ ಬರ್ತಾರೆ. ಇನ್ನುಳಿದಂತೆ ಬಿಎಲ್​ ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ, ಡಿಸಿಎಂಗಳಾದ ಸಿಎನ್ ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಕೂಡ ಲಿಸ್ಟ್​ನಲ್ಲಿದ್ದಾರೆ ಎನ್ನಲಾಗ್ತಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರನ್ನ ಬದಲಾಯಿಸಿ ಬೇರೆಯವರನ್ನ ಸಿಎಂ ಮಾಡ್ತಾರೆ ಅನ್ನೋ ಚರ್ಚೆ ನಡೀತಿರುವಾಗಲೇ ನಾಳೆ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ. ಈ ಮೂಲಕ ಬಿಎಸ್​ವೈ ಪರ ಶಕ್ತಿಪ್ರದರ್ಶನ ನಡೆಸಲಿದ್ದಾರೆ.

-masthmagaa.com

Contact Us for Advertisement

Leave a Reply