ಬಿಹಾರದಲ್ಲಿ ಖಾತೆ ತೆರೆದ ಎಐಎಂಐಎಂ..! ಕಾಂಗ್ರೆಸ್​​​​ಗೆ ಹೊಸ ಸ್ಪರ್ಧಿ..!?

ಬಿಹಾರದಲ್ಲಿ ಎಐಎಂಐಎಂ ಪಕ್ಷ ಕೊನೆಗೂ ಖಾತೆ ತೆರೆದಿದೆ. ಇಲ್ಲಿ ನಡೆದ ಉಪಚುನಾವಣೆಯಲ್ಲಿ ಕಿಶನ್ ಗಂಜ್ ಕ್ಷೇತ್ರದಲ್ಲಿ ಎಐಎಂಐಎಂ ಪಕ್ಷದ ಕಮರುಲ್ ಹೋದಾ ಗೆಲುವು ದಾಖಲಿಸಿದ್ದಾರೆ. ಈ ಮೂಲಕ 2015ರ ವಿಧಾನಸಭೆ ಚುನಾವಣೆಯಿಂದಲೂ ಬಿಹಾರದಲ್ಲಿ ಖಾತೆ ತೆರೆಯಲು ಯತ್ನಿಸುತ್ತಿರುವ ಅಸಾದುದ್ದೀನ್ ಓವೈಸಿಗೆ ಗೆಲುವು ಸಿಕ್ಕಂತಾಗಿದೆ. 2015ರಲ್ಲಿ ಬಿಹಾರದ ಒಟ್ಟು 6 ಕ್ಷೇತ್ರಗಳಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಗೆಲುವು ಸಾಧ್ಯವಾಗಿರಲಿಲ್ಲ. ಆದ್ರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಿಶನ್ ಗಂಜ್ ಕ್ಷೇತ್ರದಲ್ಲಿ ಪಕ್ಷ ಶಕ್ತಿ ಪ್ರದರ್ಶನ ಮಾಡಿತ್ತು. ಇನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸೋದಾಗಿ ಎಐಎಂಐಎಂ ಪಕ್ಷ ಘೋಷಿಸಿದೆ. ಈ ಕಿಶನ್ ಗಂಜ್ ಕ್ಷೇತ್ರ ಕಾಂಗ್ರೆಸ್​​​ನ ಭದ್ರಕೋಟೆಯಾಗಿದ್ದು, 2009ರಿಂದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಾ ಬಂದಿತ್ತು.

Contact Us for Advertisement

Leave a Reply