ಶ್ರೀಗಳ ಫೋನ್ ಕದ್ದಾಲಿಕೆ, 2 ದಿನ ಕಾದು ನೋಡಿ: ಆರ್.ಅಶೋಕ್

ಆದಿಚುಂಚನಗಿರಿ ಮಠದ ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿದೆ ಅಂತ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಗಳನ್ನೂ ರಾಜಕೀಯಕ್ಕೆ ಎಳೆದು ತಂದು ಫೋನ್ ಟ್ಯಾಪ್ ಮಾಡಿದ್ದಾರೆ. ಶ್ರೀಗಳ ಫೋನ್ ಟ್ಯಾಪ್ ಮಾಡಿದವರಿಗೆ ನಾಚಿಕೆಯಾಗಬೇಕು. ಆದಿಚುಂಚನಗಿರಿ ಶ್ರೀಗಳದ್ದು ಉದಾಹರಣೆಯಷ್ಟೆ. ಅದೇ ರೀತಿ ಇನ್ನೂ ಯಾವ್ಯಾವ ಸ್ವಾಮೀಜಿಗಳ ಫೋನ್ ಟ್ಯಾಪ್ ಆಗಿದೆಯೋ ಗೊತ್ತಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕುಡಿಯುತ್ತಾರೆ ಕೂಡ. ಯಾರ ತಲೆಯ ಮೇಲೆ ಗೂಬೆ ಕೂರುತ್ತೆ. ಯಾರ ತಲೆಯ ಮೇಲೆ ಕಾಗೆ ಕೂರುತ್ತೆ ಅನ್ನೋದು ಇನ್ನು ಎರಡು ದಿನಗಳಲ್ಲಿ ಗೊತ್ತಾಗುತ್ತೆ ಅಂತ ಹೇಳಿದ್ದಾರೆ.

ಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಅವರ ವಿಚಾರಣೆಗೂ ಒಳಪಡಿಸಿದ್ದರು. ಇದರ ಬೆನ್ನಲ್ಲೇ ಆರ್.ಅಶೋಕ್ ಈ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

Contact Us for Advertisement

Leave a Reply