8 ಸಿಂಹಗಳಿಗೆ ಒಣಕೆಮ್ಮು, ಶೀತ, ಕೊರೋನ!

masthmagaa.com:

ಹೈದರಾಬಾದ್‌ನ ಮೃಗಾಲಯ ಒಂದರಲ್ಲಿ ಇದೇ ಮೊದಲ ಬಾರಿಗೆ ಎಂಟು ಏಷ್ಯಾಟಿಕ್‌ ಸಿಂಹಗಳಿಗೆ ಕೋವಿಡ್‌ – 19 ಪಾಸಿಟಿವ್‌ ದೃಢಪಟ್ಟಿದೆ. ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ(ಸಿಸಿಎಂಬಿ) ನಡೆಸಿದ ಪರೀಕ್ಷೆಯಲ್ಲಿ ಎಂಟು ಸಿಂಹಗಳು, ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸಿಂಹಳಿಗೆ ಸೋಂಕು ತಗುಲಿದೆ.
ಎಂಟು ಸಿಂಹಗಳಲ್ಲಿ ಒಣಕೆಮ್ಮು, ಮೂಗು ಸೋರುವಿಕೆ, ಮತ್ತು ಹಸಿವಿನ ಕೊರತೆ ಸೇರಿದಂತೆ ಸಣ್ಣ ಪ್ರಮಾಣದ ರೋಗಲಕ್ಷಣಗಳನ್ನು ಮೃಗಾಲಯದ ಪಶುವೈದ್ಯರು ಗಮನಿಸಿದ್ರು. ಕೆಲವು ದಿನಗಳನಂತರ ಸಿಂಹಗಳ ಸ್ವ್ಯಾಬ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ನಂತರ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದಾಗ, ಅವುಗಳಲ್ಲಿ ಎಂಟು ಸಿಂಹಗಳಿಗೆ ಪಾಸಿಟಿವ್ ಬಂದಿದೆ ಅಂತ ಗೊತ್ತಾಗಿದೆ. ಆದ್ರೆ ಪ್ರಾಣಿಗಳಿಂದ ಮನುಷ್ಯರಿಗೆ ಕೊರೋನ ಹರಡುತ್ತಾ ಅನ್ನೋದರ ಬಗ್ಗೆ ಇದುವರೆಗೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಅಂತಾ ಕೇಂದ್ರ ಪರಿಸರ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply