ಅಸ್ಸಾಂನಲ್ಲಿ ಗೋರಕ್ಷಣೆಗೆ ಬಂತು ಹೊಸ ಮಸೂದೆ!

masthmagaa.com:

ಅಸ್ಸಾಂ ವಿಧಾನಸಭೆಯಲ್ಲಿಂದು ಗೋ ಸಂರಕ್ಷಣಾ ಮಸೂದೆ 2021ನ್ನು ಮಂಡಿಸಲಾಗಿದೆ. ಇನ್ಮುಂದೆ ರಾಜ್ಯದಲ್ಲಿ ಕೆಲವೊಂದು ಸ್ಥಳಗಳಲ್ಲಿ ಮಾತ್ರವೇ ಗೋವುಗಳ ಹತ್ಯೆಗೆ ಅವಕಾಶ ಇರುತ್ತೆ. ಹಿಂದೂಗಳು ಅಥವಾ ಗೋಮಾಂಸ ಸೇವಿಸದೇ ಇರುವವರು ಇರೋ ಪ್ರದೇಶದಲ್ಲಿ ಗೋಹತ್ಯೆ ಮತ್ತು ಮಾಂಸ ಮಾರಾಟಕ್ಕೆ ಅವಕಾಶ ಇರಲ್ಲ. ಲೈಸೆನ್ಸ್ ಪಡೆದ ಜಾಗದಲ್ಲಿ ಮಾತ್ರ ಗೋಹತ್ಯೆ ಮಾಡಬಹುದು. ವೆಟರ್ನಿಟಿ ಅಧಿಕಾರಿಗಳ ಬಳಿ ಹಸುವಿನ ಫಿಟ್​ನೆಸ್ ಸರ್ಟಿಫಿಕೇಟ್ ಕೂಡ ಪಡೀಬೇಕು ಅಂತ ಈ ಮಸೂದೆಯಲ್ಲಿ ಹೇಳಲಾಗಿದೆ. ಇನ್ನು ಮರಿ ಮತ್ತು ತಾಯಿ ಹಸುವನ್ನು ಕೊಲ್ಲುವಂತಿಲ್ಲ. ಆದ್ರೆ 14 ವರ್ಷ ಮೇಲ್ಪಟ್ಟ ಹಸು ಮತ್ತು ಹಬ್ಬದ ವೇಳೆಯೂ ಹಸುಗಳ ಹತ್ಯೆಗೆ ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply