ಅಸ್ಸಾಂ-ಮೆಘಾಲಯ ಗಡಿವಿವಾದ ಪರಿಹಾರ ಒಪ್ಪಂದಕ್ಕೆ ಸಹಿ!

masthmagaa.com:

ಈಶಾನ್ಯ ಭಾರತದ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳು ತಮ್ಮ ನಡುವೆ 50 ವರ್ಷಗಳಿಂದ ಬಾಕಿ ಉಳಿದಿದ್ದ ಗಡಿ ವಿವಾದವನ್ನ ಬಗೆಹರಿಸುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. ದೆಹಲಿಯಲ್ಲಿ ನಡೆದ ಸಹಿ ಹಾಕುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಸರ್ಮಾ ಮತ್ತು ಮೇಘಾಲಯ ಸಿಎಂ ಕೊನ್​ರಾಡ್​ ಸಂಗ್ಮಾ ಸೇರಿ ಹಲವರು ಭಾಗವಹಿಸಿದ್ರು. ಗಡಿ ವಿವಾದದ 12 ಪಾಯಿಂಟ್​​ಗಳಲ್ಲಿ 6 ಪಾಯಿಂಟ್​​ಗಳನ್ನ ಬಗೆಹರಿಸಲಾಗಿದೆ. ಉಳಿದ 6 ಪಾಯಿಂಟ್​ಗಳನ್ನ ಶೀಘ್ರದಲ್ಲೇ ಬಗೆಹರಿಸಿಕೊಳ್ಳಲು ಒಪ್ಪಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರೋ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಸರ್ಮಾ, ಕಾಂಗ್ರೆಸ್ ಈ ಸಮಸ್ಯೆಯನ್ನ ಬಗೆಹರಿಸಬಹುದಿತ್ತು. ಆದ್ರೆ ಬಗೆಹರಿಸಲಿಲ್ಲ. ಈಗ ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ನೇತೃತ್ವದಲ್ಲಿ ಆಗ್ತಿದೆ ಎಂದಿದ್ದಾರೆ. ಮತ್ತೊಂದುಕಡೆ ಮೇಘಾಲಯ ಸಿಎಂ ಕೊನ್​ರಾಡ್​ ಸಂಗ್ಮಾ ಮಾತನಾಡಿ, ಎರಡು ರಾಜ್ಯಗಳ 36 ಚದರ ಕಿಲೋ ಮೀಟರ್​ ಪ್ರದೇಶದಲ್ಲಿ ವಿವಾದ ಇದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply