ಐಎಸ್​ಐ ಮುಖ್ಯಸ್ಥರ ಬದಲಾವಣೆಯಾದ್ರೆ ಬೀಳುತ್ತಂತೆ ಇಮ್ರಾನ್ ಖಾನ್ ಸರ್ಕಾರ!

masthmagaa.com:

ಪಾಕಿಸ್ತಾನ ಐಎಸ್​ಐ ಮುಖ್ಯಸ್ಥರ ಬದಲಾವಣೆ ವಿವಾದ ಇನ್ನೂ ಬಗೆಹರಿದಿಲ್ಲ. ಈ ನಡುವೆ ಪ್ರತಿಕ್ರಿಯಿಸಿರೋ ಪಿಎಂಎಲ್​ಎನ್​​ ಅಂದ್ರೆ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷದ ಉಪಾಧ್ಯಕ್ಷೆ ಮರ್ಯಮ್ ನವಾಜ್​​, ಐಎಸ್​ಐ ಮುಖ್ಯಸ್ಥ ಫೈಜ್ ಹಮೀಜ್ ದೀರ್ಘಾವಧಿಗೆ ಮುಂದುವರಿಯಬೇಕು ಅಂತ ಪ್ರಧಾನಿ ಇಮ್ರಾನ್ ಖಾನ್ ಬಯಸಿದ್ದಾರೆ. ಯಾಕಂದ್ರೆ ಐಎಸ್​ಐ ಮುಖ್ಯಸ್ಥರ ಬದಲಾವಣೆಯಾದ್ರೆ ಇಮ್ರಾನ್ ಖಾನ್ ಸರ್ಕಾರ ಹೌಸ್ ಆಫ್ ಕಾರ್ಡ್​​​​​ ರೀತಿಯಲ್ಲಿ ಬಿದ್ದು ಹೋಗುತ್ತೆ ಅಂತ ಹೇಳಿದ್ದಾರೆ. ಹೌಸ್ ಆಫ್ ಕಾರ್ಡ್ಸ್​ ಅಂದ್ರೆ ಆಟವಾಡುವ ಕಾರ್ಡ್​​ಗಳನ್ನು ಜೋಡಿಸಿ ಕಟ್ಟಿದ ಮನೆ ಅಂತ ಅರ್ಥ.. ಚೂರೂ ಮುಟ್ಟಿದ್ರೆ ಎಲ್ಲಾ ಬಿದ್ದುಹೋಗುತ್ತಲ್ವಾ ಅದು.. ಆ ರೀತಿಯಲ್ಲಿ ಇಮ್ರಾನ್ ಖಾನ್ ಸರ್ಕಾರ ಬಿದ್ದು ಹೋಗುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ಕೇಳೋರೇ ಇಲ್ಲದ ಪರಿಸ್ಥಿತಿ ಬಂದಿದೆ. ಇನ್ನು ಅಮೆರಿಕದಲ್ಲಿ ಬೈಡೆನ್ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ ಒಂದೂ ಸಲ ಫೋನೇ ಮಾಡಿಲ್ಲ. ಈ ಕಡೆ ಇಮ್ರಾನ್ ಖಾನ್ ಕಾಲ್ ಮಾಡಿದ್ರೂ ಭಾರತದ ಪ್ರಧಾನಿ ಮೋದಿ ರಿಸೀವ್ ಮಾಡ್ತಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

-masthmagaa.com

Contact Us for Advertisement

Leave a Reply