ಅಮೆರಿಕದಲ್ಲಿ ಮನೆ ಮೇಲೆ ಬಿದ್ದ ವಿಮಾನ: ಭಾರೀ ದುರಂತ

masthmagaa.com:

ಅಮೆರಿಕದಲ್ಲಿ ಮತ್ತೊಂದು ಸಣ್ಣ ವಿಮಾನ ಪತನವಾಗಿದೆ. ಕ್ಯಾಲಿಫೋರ್ನಿಯಾ ಸಿಟಿಯಲ್ಲಿ ಮನೆಗಳ ಮೇಲೆ ಬಂದು ಅಪ್ಪಳಿಸಿದ ಪರಿಣಾಮ ಕನಿಷ್ಟ ಇಬ್ಬರು ಮೃತಪಟ್ಟಿದ್ದಾರೆ. ಎರಡು ಮನೆಗಳು ಬೆಂಕಿ ಹೊತ್ತಿ ಉರಿದಿವೆ. ಅಲ್ಲೇ ಸಮೀಪದಲ್ಲಿ ನಿಂತಿದ್ದ ಡೆಲಿವರಿ ಟ್ರಕ್ ಕೂಡ ಹಾನಿಗೊಳಗಾಗಿದೆ. ಹಲವರು ಗಾಯಗೊಂಡಿದ್ದಾರೆ. ಟ್ವಿನ್ ಎಂಜಿನ್ ಸೆಸ್ನಾ 340 ವಿಮಾನ ಕೇವಲ 6 ಸೀಟಿನ ಸಣ್ಣ ವಿಮಾನವಾಗಿತ್ತು. ಅರಿಜೋನಾದ ಯೂಮಾದಿಂದ ಹಾರಾಟ ಆರಂಭಿಸಿತ್ತು. ಆದ್ರೆ ಅವಶೇಶಗಳ ಪುಡಿಯೂ ಸಿಗದಂತೆ ವಿಮಾನ ನಾಶವಾಗಿದೆ. ಕಳೆದ ತಿಂಗಳಷ್ಟೇ ಟೆಕ್ಸಾಸ್ ನಲ್ಲಿ ಅಮೆರಿಕದ ವಾಯುಪಡೆಯ ಟ್ರೇನಿಂಗ್ ವಿಮಾನವೊಂದು ಇದೇ ಥರ ಪತನ ಆಗಿ ಜನ ವಸತಿ ಪ್ರದೇಶದ ಮೇಲೆ ಹೋಗಿ ಬಿದ್ದಿತ್ತು. ಇಬ್ಬರು ಅಮೆರಿಕನ್ ಏರ್ಫೋರ್ಸ್ ಪೈಲಟ್ಸ್ ಗಾಯಗೊಂಡು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply