ಕೋವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ.. 44 ಜನ ಸಜೀವ ದಹನ

masthmagaa.com:

ಕೊರೋನಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 44 ಜನ ಮೃತಪಟ್ಟಿರೋ ಘಟನೆ ದಕ್ಷಿಣ ಇರಾಕ್​ನ ನಸ್ಸಿರಿಯಾ ನಗರದಲ್ಲಿ ನಡೆದಿದೆ. 67ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಟ್ಯಾಂಕ್​ ಸ್ಫೋಟಗೊಂಡಿದ್ದೇ ಅಗ್ನಿ ಅವಘಡಕ್ಕೆ ಕಾರಣ ಎನ್ನಲಾಗ್ತಿದೆ. ಮೃತಪಟ್ಟವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಕೂಡ ಸೇರಿದ್ದಾರೆ. ಹಲವರು ನಾಪತ್ತೆಯಾಗಿರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ ಇದೆ. ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆ ಮುಂದೆ ಗಲಾಟೆ ಮಾಡಿ, ಪೊಲೀಸ್​ ವಾಹನಗಳಿಗೆ ಬೆಂಕಿ ಹೆಚ್ಚಿದ್ದಾರೆ. ಇದರ ಬೆನ್ನಲ್ಲೇ ಆಸ್ಪತ್ರೆಯ ಮ್ಯಾನೇಜರ್​ ಸೇರಿದಂತೆ ನಸ್ಸಿರಿಯಾದ ಆರೋಗ್ಯ ಅಧಿಕಾರಿಗಳನ್ನ ಅರೆಸ್ಟ್ ಮಾಡುವಂತೆ ಇರಾಕ್ ಪ್ರಧಾನಿ ಮುಸ್ತಾಫಾ ಅಲ್​ ಕಧಿಮಿ ಆದೇಶಿಸಿದ್ದಾರೆ. ಯುದ್ಧ ಮತ್ತು ವಿವಿಧ ದೇಶಗಳು ಹೇರಿರೋ ಸ್ಯಾಂಕ್ಷನ್ಸ್​ನಿಂದ ಇರಾಕ್​ನ ಆರೋಗ್ಯ ವ್ಯವಸ್ಥೆ ಈಗಾಗಲೇ ಹದಗೆಟ್ಟು ಹೋಗಿದೆ. ಕೊರೋನಾ ಬಿಕ್ಕಟ್ಟನ್ನ ಎದುರಿಸಲು ಹೆಣಗಾಡ್ತಿದೆ. ಇರಾಕ್​ನಲ್ಲಿ ಇದುವರೆಗೆ 14 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದ್ದು, 17 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈ ವರ್ಷದ ಏಪ್ರಿಲ್​ ತಿಂಗಳಲ್ಲಿ ಬಾಗ್ದಾದ್​​ನ ಕೋವಿಡ್​ ಆಸ್ಪತ್ರೆಯಲ್ಲೂ ಆಕ್ಸಿಜನ್​ ಟ್ಯಾಂಕ್​ ಸ್ಫೋಟಿಸಿ 82 ಜನ ಪ್ರಾಣ ಕಳ್ಕೊಂಡಿದ್ರು.

-masthmagaa.com

Contact Us for Advertisement

Leave a Reply