ಅವತಾರ-2 ಮಾರ್ಚ್‌-28ಕ್ಕೆ ರಿಲೀಸ್‌

masthmagaa.com:

13 ವರ್ಷಗಳ ಹಿಂದೆ ಬಂದಂತ ಒಂದು ಸಿನಿಮಾ ಇಡೀ ಸಿನಿಮಾ ಇಂಡಸ್ಟ್ರಿಯನ್ನೇ ಅಲ್ಲಾಡಿಸಿಬಿಟ್ಟಿತ್ತು. ಅದೇ ಜೇಮ್ಸ್‌ ಕ್ಯಾಮರೂನ್‌ ಅವರ ಡೈರೆಕ್ಷನ್‌ನಲ್ಲಿ ಬಂದಂತ ಅವತಾರ್‌. ಆ ವಿಷ್ವಲ್ಸ್‌, ಸೌಂಡ್ಸ್‌, ಎಫೆಕ್ಟ್ಸ್‌ ಎಲ್ಲಾ ಆಡಿಯನ್ಸ್‌ನ್ನ ಸೀದಾ ಪಂಡೋರಾ ಎನ್ನುವಂತ ಬೇರೆ ಪ್ರಪಂಚಕ್ಕೆ ಕರ್ಕೊಂಡು ಹೋಗಿದ್ದು ಸುಳ್ಳಲ್ಲ. 13 ವರ್ಷಗಳ ನಂತರ ಕಳೆದ ವರ್ಷ ಡಿ.22ರಂದು `ಅವತಾರ್ 2′ ವಿಶ್ವದೆಲ್ಲೆಡೆ ರಿಲೀಸ್ ಆಗಿತ್ತು. ಇದಕ್ಕೂ ಕೂಡ ಅಭಿಮಾನಿಗಳಿಂದ ಒಳ್ಳೆಯ ಪ್ರಶಂಸೆ ಸಿಕ್ಕಿತ್ತು. ಇದರಲ್ಲಿ ವಿಶೇಷ ಏನಪ್ಪ ಅಂದ್ರೆ ಈ ಮೂವಿ ಕನ್ನಡಲ್ಲೂ ಕೂಡ ಡಬ್‌ ಆಗಿ ರಿಲೀಸ್‌ ಆಗಿದೆ. ಅವತಾರ -2 ಇಂಡಿಯನ್‌ ಟಿಪಿಕಲ್‌ ಫ್ಯಾಮಿಲಿ ಡ್ರಾಮಾ ಅಂದ್ರೆ ತಪ್ಪಾಗಲ್ಲ, ಯಾಕಂದ್ರೆ ಸಿನಿಮಾ ಪೂರ್ತಿ ಫ್ಯಾಮಿಲಿ ಸೆಂಟಿಮೆಂಟ್‌, ಫ್ಯಾಮಿಲಿ ಸೇಫ್ಟಿ ಮೇಲೆ ನಿಂತಿದೆ. ಒಬ್ಬ ತಂದೆ ತನ್ನ ಪರಿವಾರವನ್ನ ಸುರಕ್ಷಿತವಾಗಿ ಇಡೋಕೆ ಎಷ್ಟೆಲ್ಲಾ ಕಷ್ಟ ಪಡ್ತಾನೆ ಅನ್ನೋದನ್ನ ತೋರ್ಸಿದ್ದಾರೆ. ಇಂತಹ ಅದ್ಭುತವಾದ ಚಿತ್ರವನ್ನ ಥೀಯೆಟರ್‌ನಲ್ಲಿ ನೋಡೊ ಮಜಾನೇ ಬೇರೆ ಬಿಡಿ. ಥೀಯೆಟರ್‌ನಲ್ಲಿ ಮಿಸ್‌ ಮಾಡ್ಕೊಂಡವರು ಇವಾಗ ಈ ಸಿನಿಮಾನ ಒಟಿಟಿಯಲ್ಲಿ ನೋಡಬಹುದು. ಅಷ್ಟೆಲ್ಲಾ ವಿಶೇಷತೆಗಳನ್ನ ಹೊಂದಿರುವ ಈ ಮೂವಿ ಒಟಿಟಿಯಲ್ಲಿ ಮಾರ್ಚ್‌ 28ರಂದು ರಿಲೀಸ್‌ ಆಗಲಿದೆ. ಅಮೇಜಾನ್ ಪ್ರೈಂ ಸೇರಿದಂತೆ ಮುಂತಾದ ಒಟಿಟಿ ಸಂಸ್ಥೆಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿವೆ. ಒಟಿಟಿಯಲ್ಲಿ `ಅವತಾರ್ 2′ ಸಿನಿಮಾ ವೀಕ್ಷಿಸುವುದರ ಜೊತೆಗೆ ಮೇಕಿಂಗ್ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದಾಗಿದೆ. ಹಾಗಾಗಿ ʻಅವತಾರ್ 2ʼ ಚಿತ್ರದ ಒಟಿಟಿ ಎಂಟ್ರಿಗೆ ಫ್ಯಾನ್ಸ್ ಕಾಯ್ತಿದ್ದಾರೆ.

-masthmagaa.com

Contact Us for Advertisement

Leave a Reply