ಅಯೋಧ್ಯೆಯಲ್ಲಿ 56-60 ಮಸೀದಿಗಳಿವೆ..ಎಲ್ಲಿ ಬೇಕಿದ್ರೂ ನಮಾಜ್ ಮಾಡ್ಬಹುದು..!

ದೆಹಲಿ: ಅಯೋಧ್ಯೆಯಲ್ಲಿ 56ರಿಂದ 60 ಮದೀಸಿಗಳಿವೆ. ಮುಸ್ಲಿಮರು ಅವುಗಳಲ್ಲಿ ಎಲ್ಲಿ ಬೇಕಾದರೂ ಹೋಗಿ ನಮಾಜ್ ಮಾಡಬಹುದು. ಆದ್ರೆ ಇದು ರಾಮಜನ್ಮಭೂಮಿ ಒಂದೇ ಇರೋದು. ಅದನ್ನು ನಾವು ಬದಲಿಸಲು ಸಾಧ್ಯವಿಲ್ಲ ಅಂತ ಹಿಂದೂಗಳ ಪಕ್ಷದ ವಕೀಲರು ವಾದ ಮಂಡಿಸಿದ್ದಾರೆ.

ಸುಪ್ರೀಂಕೋರ್ಟ್​​​​ನಲ್ಲಿ ಅಯೋಧ್ಯೆ ವಿಚಾರವಾಗಿ ದೀರ್ಘಕಾಲದಿಂದ ವಿಚಾರಣೆ ನಡೆಯುತ್ತಿದೆ. ಅದರಲ್ಲೂ ಕಳೆದ 39 ದಿನಗಳಿಂದ ನಿರಂತರವಾಗಿ ವಿಚಾರಣೆ ನಡೆಯುತ್ತಿದ್ದು, ಅಕ್ಟೋಬರ್ 17ರೊಳಗೆ ಮುಗಿಸುವಂತೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಡೆಡ್​ಲೈನ್ ಕೊಟ್ಟಿದ್ದಾರೆ. ನಿನ್ನೆಗೆ ಮುಸ್ಲಿಂ ಪಕ್ಷದ ವಾದ ಮುಗಿದಿದ್ದು, ಇಂದು ಹಿಂದೂ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ.

ಸುಪ್ರೀಂಕೋರ್ಟ್​​ನಲ್ಲಿ ವಾದ ಮಂಡಿಸಿದ ವಕೀಲ ಪರಾಸರಣ್​​, ಮಸೀದಿ ಮಸೀದಿಯಾಗಿಯೇ ಇರುತ್ತೆ ಎಂದು ನಾವು ಒಪ್ಪುವುದಿಲ್ಲ. ಆದ್ರೆ ದೇವಸ್ಥಾನ ಯಾವಾಗಲೂ ದೇವಸ್ಥಾನವಾಗಿಯೇ ಇರುತ್ತೆ. ಇತಿಹಾಸದ ಬಗ್ಗೆ ಸುಪ್ರೀಂಕೋರ್ಟ್​​​ಗೆ ಸುಳ್ಳು ಮಾಹಿತಿ ನೀಡಲಾಗಿದೆ. ಅದನ್ನ ಸರಿಪಡಿಸಬೇಕಿದೆ. ಯಾರೋ ವಿದೇಶದಿಂದ ಬಂದು ಇಲ್ಲಿ ತಮ್ಮ ಕಾನೂನನ್ನು ಹೇರಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನೊಂದು ತಿಂಗಳಲ್ಲಿ ಅಂದ್ರೆ ನವೆಂಬರ್ 17ರಂದು ರಂಜನ್ ಗೊಗೊಯ್ ನಿವೃತ್ತಿ ಹೊಂದಲಿದ್ದು, ಅಷ್ಟರಲ್ಲಿ ಈ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

Contact Us for Advertisement

Leave a Reply