ಆಯುರ್ವೇದ ಕ್ಷೇತ್ರಕ್ಕೆ ಬಿಗ್ ನ್ಯೂಸ್! ಪ್ರಧಾನಿ ಮೋದಿ ಮಹತ್ವದ ಘೋಷಣೆ.

masthmagaa.com:

ಸಾಂಪ್ರದಾಯಿಕ ಚಿಕಿತ್ಸೆಯನ್ನ ಅರಸಿ ದೇಶಕ್ಕೆ ಬರೋ ವಿದೇಶೀಯರಿಗೆ ಆಯುಷ್ ಅನ್ನೋ ಹೊಸ ವಿಸಾ ಕೆಟಗರಿಯನ್ನ ಆದಷ್ಟೂ ಬೇಗ ಪರಿಚಯಿಸಲಾಗುತ್ತೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಗುಜಾರಾತ್‌ನಲ್ಲಿ ಈ ಬಗ್ಗೆ ಮಾತನಾಡಿದ ಅವ್ರು, ಸಾಂಪ್ರದಾಯಿಕ ವೈದ್ಯಕೀಯ ಪದ್ದತಿಯ ಔಷಧಗಳನ್ನ ಹೊಸ ತಂತ್ರಜ್ಞಾನದ ಮೂಲಕ ಪರಿಶೀಲಿಸಲಾಗುತ್ತೆ. ಅದರ ಗುಣಮಟ್ಟವನ್ನ ಅಳೆಯೋದಕ್ಕೆ, ಅದನ್ನ ದೃಢಪಡಿಸೋದಕ್ಕೆ ಆಯುಷ್‌ ಮಾರ್ಕ್‌ ಅನ್ನೋ ಲೇಬಲ್‌ ಕೂಡ ನೀಡಲಾಗುತ್ತೆ. ಅದರಿಂದ ಔಷಧಗಳನ್ನ ವಿಶ್ವಾಸದಿಂದ ಖರೀದಿಸಬಹುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply