ವಿಡಿಯೋ: ಆನೆಯನ್ನೇ ಹಿಂದೇಟು ಹಾಕುವಂತೆ ಮಾಡಿದ ಮರಿ ಎಮ್ಮೆ..!

ಎಮ್ಮೆ ಮರಿಯೊಂದು ಆನೆಯ ಜೊತೆಗೆ ಕಿರಿಕ್ ಮಾಡಿಕೊಂಡಿದೆ. ಎಮ್ಮೆ ಮರಿಯ ವರ್ತನೆಗೆ ಏನು ಮಾಡಬೇಕೆಂದು ಗೊತ್ತಾಗದೇ ಆನೆ ಫುಲ್ ಕನ್ಫ್ಯೂಸ್ ಆಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗ್ತಿದೆ. ಇದ್ರಲ್ಲಿ ಸಣ್ಣ ಎಮ್ಮೆ ಮರಿಯೊಂದು ಆನೆಯತ್ತ ನುಗ್ಗುತ್ತಿದೆ. ಆನೆ ಏನು ಮಾಡಬೇಕು ಅಂತ ಗೊತ್ತಾಗದೇ ಹಿಂದೆ ಹಿಂದೆ ಹೋಗುತ್ತಿದೆ. ನಂತರ ತನ್ನ ಮರಿಯತ್ತ ಓಡುವ ತಾಯಿ ಎಮ್ಮೆ, ಮರಿಯನ್ನು ತಡೆದಿದೆ. ಅಲ್ಲದೆ ಆನೆಯಿಂದ ದೂರಕ್ಕೆ ಕರೆದುಕೊಂಡು ಹೋಗಿದೆ.

https://twitter.com/i/status/1235219121215655936

ಯಾವಾಗಲೂ ಪ್ರಾಣಿಗಳ ವಿಡಿಯೋಗಳನ್ನು ಶೇರ್ ಮಾಡೋ ನೇಚರ್ ಈಸ್ ಲಿಟ್ ಅನ್ನೋ ಟ್ವಿಟ್ಟರ್​ ಅಕೌಂಟ್​​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 17 ಸೆಕೆಂಡ್ ಇರೋ ಈ ವಿಡಿಯೋವನ್ನು ಈಗಾಗಲೇ 1.2 ಲಕ್ಷ ಜನ ವೀಕ್ಷಿಸಿದ್ದು, 9 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋ ನೋಡಿದ ಜನ ಎಮ್ಮೆ ಮರಿಯ ಧೈರ್ಯ ಮತ್ತು ಮರಿಯನ್ನು ರಕ್ಷಿಸಿ ದೂರ ಕರೆದುಕೊಂಡು ಹೋದ ತಾಯಿ ಎಮ್ಮೆಯ ವರ್ತನೆಯನ್ನು ಹಾಡಿ ಹೊಗಳಿದ್ದಾರೆ. ಆದ್ರೆ ಈ ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Contact Us for Advertisement

Leave a Reply