ಬಾಂಗ್ಲಾದೇಶಕ್ಕೂ ಹರಡಿದ ಕೊರೋನಾ.. ಸೌದಿ ಅರೇಬಿಯಾದಲ್ಲಿ ಹೆಚ್ಚಿದ ಆತಂಕ..!

masthmagaa.com:

ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡು 3,600ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ಮಹಾಮಾರಿ ಇದೀಗ ಭಾರತದ ನೆರೆಯ ದೇಶ ಬಾಂಗ್ಲಾದೇಶಕ್ಕೂ ಹರಡಿದೆ. ಭಾನುವಾರ ಬಾಂಗ್ಲಾದೇಶದ ಮೂವರಿಗೆ ಕೊರೋನಾ  ವೈರಸ್​ ತಗುಲಿರುವುದು ದೃಢಪಟ್ಟಿದೆ. ಮೂವರ ಪೈಕಿ ಇಬ್ಬರು ಇತ್ತೀಚೆಗಷ್ಟೇ ಕೊರೋನಾ ಪೀಡಿತ ಇಟಲಿಯಿಂದ ಬಂದಿದ್ದರು ಎನ್ನಲಾಗಿದೆ. ಅವರಿಂದ ಮತ್ತೊಬ್ಬ ಸಂಬಂಧಿಗೂ ವೈರಸ್ ಹರಡಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಮೂವರ ಮೇಲೆ ತೀವ್ರ ನಿಗಾ ಇಡಲಾಗಿದೆ.

ಇನ್ನು ಸೌದಿ ಅರೇಬಿಯಾದ ಖಾತಿಫ್ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ತಾತ್ಕಾಲಿಕ ಲಾಕ್​ಡೌನ್ ಹೇರಿದೆ. ಶಿಯಾ ಮುಸ್ಲಿಮರು ಹೆಚ್ಚಾಗಿ ವಾಸವಿರುವ ಈ ಪ್ರದೇಶದಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಲಾಕ್​​ಡೌನ್​ ಹಿನ್ನೆಲೆ ಇಲ್ಲಿಗೆ ಯಾರೂ ಆಗಮಿಸುಂತಿಲ್ಲ ಅಥವಾ ಇಲ್ಲಿಂದ ಬೇರೆಕಡೆ ಯಾರೂ ಹೋಗುವಂತಿಲ್ಲ. ಜೊತೆಗೆ ಖಾತಿಫ್​ನಲ್ಲಿ ಶಾಲಾ-ಕಾಲೇಜು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ. ಸೌದಿ ಅರೇಬಿಯಾದಲ್ಲಿ ಸದ್ಯ 11 ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ.

-masthmagaa.com

Contact Us for Advertisement

Leave a Reply