ಬ್ಯಾಂಕ್​​ನಲ್ಲಿ ಕೆಲಸ ಇದ್ರೆ ಇವತ್ತೇ ಮುಗಿಸಿ..ಒನ್ನು 4 ದಿನ ತೆರೆಯಲ್ಲ ಬ್ಯಾಂಕ್..!

ಬ್ಯಾಂಕ್​ನಲ್ಲಿ ಏನಾದ್ರು ಕೆಲಸ ಇದ್ದರೆ ಇವತ್ತೇ ಮುಗಿಸಿಕೊಳ್ಳಿ.  ನಾಳೆಯಿಂದ 4 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿದೆ. ನಾಳೆ ಶನಿವಾರವಾದ್ದರಿಂದ ಹಲವು ಬ್ಯಾಂಕ್​​ಗಳು ಬಂದ್ ಇರಲಿವೆ. ಅಕ್ಟೋಬರ್ 27ರಂದು ಭಾನುವಾರವಾದ್ದರಿಂದ ಬ್ಯಾಂಕ್​​​​ಗೆ ರಜೆ ಇರುತ್ತೆ. ಇದಾದ ಬಳಿಕ 2 ದಿನ ದೀಪಾವಳಿ ಹಿನ್ನೆಲೆಯಲ್ಲಿ ಬ್ಯಾಂಕ್​​ಗಳಿಗೆ ರಜೆ ಇರಲಿದೆ. ಈ ಮೂಲಕ ಒಟ್ಟೊಟ್ಟಿಗೆ 4 ದಿನಗಳ ಕಾಲ ಬ್ಯಾಂಕ್​​​​​​​ಗಳು ಬಂದ್ ಇರಲಿವೆ. ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಬೇಗನೇ ಬ್ಯಾಂಕ್​​ಗೆ ಹೋಗಿ ಕೆಲಸ ಮುಗಿಸಿಕೊಳ್ಳಿ.

Contact Us for Advertisement

Leave a Reply