ಹೊಸ ದೇಶದ ಜನನ! ಯಾವುದು ಗೊತ್ತಾ?

masthmagaa.com:

ಕೆರಿಬಿಯನ್ ದೇಶವಾದ ಬಾರ್ಬಡೋಸ್​ ಸೋಮವಾರ ರಾತ್ರಿಯಿಂದ ಸ್ವತಂತ್ರ ದೇಶವಾಗಿ ಹೊರಹೊಮ್ಮಿದೆ. ಈ ಮೂಲಕ ಅತ್ಯಂತ ಹೊಸ ರಿಪಬ್ಲಿಕ್ ಅನ್ನೋ ಹೆಸರಿಗೆ ಪಾತ್ರವಾಗಿದೆ. ನಿನ್ನೆ ಮಧ್ಯರಾತ್ರಿಯಿಂದ ಬಾರ್ಬಡೋಸ್ ದೇಶ ಬ್ರಿಟನ್ ಮಹಾರಾಣಿ ಎಲಿಜಬೆತ್ ಸೆಕೆಂಡ್​​ನ್ನು ದೇಶದ ಮುಖ್ಯಸ್ಥರ ಸ್ಥಾನದಿಂದ ತೆಗೆದು ಹಾಕಿದೆ. ಸುಮಾರು 400 ವರ್ಷಗಳ ಹಿಂದೆ ಬಾರ್ಬಡೋಸ್​​​ಗೆ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷರ ನೌಕೆ ಹೋಗಿತ್ತು. ನಿನ್ನೆ ರಾತ್ರಿ ಹೀರೋಸ್ ಸ್ಕ್ವೇರ್ ಬಳಿ ಸೇರಿದ ಜನ ರಿಪಬ್ಲಿಕ್ ದೇಶವಾದ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಬ್ರಿಟನ್​​ನ ಪ್ರಿನ್ಸ್ ಚಾರ್ಲ್ಸ್​​ ಕೂಡ ಅಲ್ಲೇ ಇದ್ರು. ಬಾರ್ಬಡೋಸ್ ದೇಶದ ಈ ಹೆಜ್ಜೆ ಈಗಲೂ ಬ್ರಿಟನ್ ರಾಣಿಯನ್ನೇ ರಾಣಿ ಎಂದು ಗೌರವಿಸೋ ದೇಶಗಳು ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ.

-masthmagaa.com

Contact Us for Advertisement

Leave a Reply