ಬಿಸಿಸಿಐಗೆ ಸೌರವ್ ಗಂಗೂಲಿ ಹೊಸ ಅಧ್ಯಕ್ಷ..?

ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಬಿಸಿಸಿಐ ಅಂದ್ರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಮಾಜಿ ಆಟಗಾರ ಬೃಜೇಶ್ ಪಟೇಲ್ ಈ ರೇಸ್​ನಲ್ಲಿದ್ದು ಅವರಿಗಿಂತ ಗಂಗೂಲಿಯವರೇ ಮುಂದಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ನೂತನ ಕಾರ್ಯದರ್ಶಿ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಾಲ್ ಖಜಾಂಚಿಯಾಗಲಿದ್ದಾರೆ.

ಆದ್ರೆ ಬಿಸಿಸಿಐ ಅಧ್ಯಕ್ಷರ ಆಯ್ಕೆ ಇನ್ನೂ ಖಚಿತವಾಗಿಲ್ಲ. ಸೌರವ್​ ಗಂಗೂಲಿ ಮತ್ತು ಬ್ರಿಜೇಶ್ ಪಟೇಲ್ ಇಬ್ಬರೂ ಈ ರೇಸ್​ನಲ್ಲಿ ಮುಂದೆ ಇದ್ದು, ಯಾರಿಗೆ ಪಟ್ಟ ಒಲಿಯುತ್ತೆ ಅನ್ನೋದು ಇನ್ನೂ ಗೊಂದಲದಲ್ಲಿದೆ. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದೆ.

47 ವರ್ಷದ ಗಂಗೂಲಿ ಕ್ರಿಕೇಟ್ ಅಸೋಸಿಯೇಷನ್ ಆಫ್ ಬಂಗಾಳದ ಹಾಲಿ ಅಧ್ಯಕ್ಷರಾಗಿದ್ದಾರೆ. ಬಿಸಿಸಿಐ ಅಧ್ಯಕ್ಷರಾದಲ್ಲಿ 2020ರ ಸೆಪ್ಟೆಂಬರ್ ತಿಂಗಳವರೆಗೆ ಈ ಹುದ್ದೆಯನ್ನು ನಿರ್ವಹಿಸಲಿದ್ದಾರೆ.

Contact Us for Advertisement

Leave a Reply