ನ್ಯೂಜಿಲೆಂಡ್ ಪ್ರಧಾನಿ ಫೇಸ್​ಬುಕ್ ಲೈವ್ ವೇಳೆ ಆಗಿದ್ದೇನು?

masthmagaa.com:

ಇಷ್ಟು ದಿನ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದವರು ಆನ್​ಲೈನ್ ಮೀಟಿಂಗ್​​ ಮಾಡುವಾಗ ಡಿಸ್ಟರ್ಬ್ ಆಗೋದು ನೋಡ್ತಿದ್ರಿ. ಇದೀಗ ನ್ಯೂಜಿಲೆಂಡ್ ಪ್ರಧಾನಿ ಫೇಸ್​ಬುಕ್ ಲೈವ್​ನಲ್ಲಿ ಮಾತಾಡುವಾಗ ಮಗಳು ಅಡ್ಡಿಪಡಿಸಿದ್ದಾಳೆ. ಪ್ರಧಾನಿ ಜೆಸಿಂಡಾ ಅರ್ಡೆರ್ನ್​​​ ಫೇಸ್​ಬುಕ್​​ನಲ್ಲಿ ಲೈವ್ ಬಂದು ದೇಶವನ್ನು ಉದ್ದೇಶಿಸಿ ಮಾತಾಡ್ತಿದ್ರು. ಕೊರೋನಾ ನಿರ್ಬಂಧಗಳಲ್ಲಿ ಏನೇನು ಬದಲಾವಣೆ ಇದೆ ಅಂತ ಸೀರಿಯಸ್ಸಾಗಿ ಮಾತಾಡುವಾಗ ಮಮ್ಮಿ ಅಂತ ಮಗಳು ಬಂದಿದ್ದಾಳೆ. ಈ ವೇಳೆ ಜೆಸಿಂಡಾ, ತಮ್ಮ ಮೂರು ವರ್ಷದ ಮಗಳಿಗೆ ಸ್ವಲ್ಪ ಹೊತ್ತು ಕಾಯುವಂತೆ ಸೂಚಿಸಿದ್ದಾರೆ. ಬಳಿಕ ಜನರಲ್ಲಿ ಕ್ಷಮೆ ಕೇಳಿ ಮಾತು ಮುಂದುವರಿಸಿದ್ದಾರೆ.

-masthmagaa.com

Contact Us for Advertisement

Leave a Reply