ಚೀನಾಗೆ ಹೆಚ್ಚಿದ ಸಂಕಷ್ಟ! ರಾಜಧಾನಿಯಲ್ಲಿ ನೆಗಟಿವ್‌ ಆದ ಜನಸಂಖ್ಯೆ ಬೆಳವಣಿಗೆ!

masthmagaa.com:

ವಯಸ್ಸಾದವರ ಸಂಖ್ಯೆ ಹೆಚ್ಚಾಗ್ತಿದೆ ಅಂತ ಚಿಂತೆಯಲ್ಲಿರೊ ಚೀನಾಕ್ಕೆ ಮತ್ತೊಂದು ಶಾಕ್‌ ಆಗಿದೆ. 2003ರಿಂದ ಮೊದಲ ಬಾರಿಗೆ ರಾಜಧಾನಿ ಬೀಜಿಂಗ್‌ ಜನಸಂಖ್ಯೆಯಲ್ಲಿ ಇಳಿಕೆಯನ್ನ ಕಂಡಿದೆ. ಬೀಜಿಂಗ್‌ನಲ್ಲಿ ಮರಣದ ದರ 5.72ಕ್ಕೆ ಏರಿಕೆಯಾಗಿದ್ರೆ, ಜನನ ದರ 5.67ಕ್ಕೆ ಇಳಿಕೆಯಾಗಿದೆ. ಈ ಮೂಲಕ ಪಾಪುಲೇಶನ್‌ ಗ್ರೋಥ್‌ ನೆಗಟಿವ್‌ ಆಗಿದೆ. ಅಂದ್ರೆ ಸಾಯೋರ ಸಂಖ್ಯೆ ಹೆಚ್ಚಾಗಿ, ಹುಟ್ಟುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅಂದ್ಹಾಗೆ ಕಳೆದ ವರ್ಷ ಕೂಡ ಚೀನಾ, 60 ವರ್ಷಗಳಲ್ಲೇ ಮೊದಲ ಬಾರಿಗೆ ತನ್ನ ಜನಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು.

-masthmagaa.com

Contact Us for Advertisement

Leave a Reply