ರಾಜ್ಯಸರ್ಕಾರದಿಂದ ವಿದ್ಯುತ್‌ ಬೆಲೆ ಏರಿಕೆ: ಸರ್ಕಾರ ಉದ್ಯಮಿಗಳ ಕಾಮಧೇನು ಎಂದು HDK ಕಿಡಿ

masthmagaa.com:

ರಾಜ್ಯದ ಜನರಿಗೆ ಸರ್ಕಾರದಿಂದ ಮತ್ತೆ ಬೆಲೆ ಏರಿಕೆಯ ಬಿಸಿ ಅಲ್ಲ…ಕರೆಂಟ್‌ ಶಾಕ್‌ ನೀಡಿದೆ. ದೈನಂದಿನ ಬಳಕೆಯ ವಿದ್ಯುತ್‌ ದರ ಏರಿಕೆ ಮಾಡೋದಕ್ಕೆ ಸರ್ಕಾರ ನಿರ್ಧಾರ ಮಾಡಿದ್ದು ಪರಿಷೃತ ನಿಯಮ ಜುಲೈ 1 ರಿಂದಲೇ ಜಾರಿಗೆ ಬರಲಿದೆ. ಕಲ್ಲಿದ್ದಲು ಬೆಲೆ ಹೆಚ್ಚಾದ ಪರಿಣಾಮ ಇದರ ಖರೀದಿಗಾಗಿ ಹಣ ಭರಿಸಿ ಹೊಂದಾಣಿಕೆ ಮಾಡಿಕೊಳ್ಳೋಕೆ ಆಯೋಗವು 2022ರ ಜುಲೈ 1ರಿಂದ ಡಿಸೆಂಬರ್‌ 31ರ ವರೆಗೆ ಕಾಲಾವಕಾಶ ನೀಡಿದೆ. ಎಸ್ಕಾಂಗಳ ನಷ್ಟದ ಪ್ರಮಾಣವನ್ನ ಪರಿಗಣಿಸಿ ಇಂಧನ ವೆಚ್ಚ ಹೊಂದಾಣಿ ಶುಲ್ಕ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ. ಇದು ತಾತ್ಕಲಿಕ ಏರಿಕೆ ಅಷ್ಟೇ ಅಂತ KERC ಕರ್ನಾಟಕ ಎಲೆಕ್ರ್ಟಿಕಲ್‌ ರೆಗ್ಯೂಲೆಟರಿ ಕಮಿಷನ್‌ ಅಧ್ಯಕ್ಷ ಪಿ ರವಿಕುಮಾರ್‌ ಹೇಳಿದ್ದಾರೆ. ಅಂದ್ಹಾಗೆ ಬೆಸ್ಕಾಂ- . 55.28 ಮೆಸ್ಕಾಂ- . 38.98 ಸೆಸ್ಕಾಂ- . 40.47 ಹೆಸ್ಕಾಂ- . 49.54 ಗೆಸ್ಕಾಂ 39.36 ಹೆಚ್ಚುಮಾಡುವಂತೆ ಕೋರಿದ್ದವು. ಆದ್ರೆ ಇದರಲ್ಲಿ ಕಡಿತಗೊಳಿಸಲಾಗಿದ್ದು ಸುಮಾರು 100 ಯೂನಿಟ್‌ ಬಳಸುವ ಗ್ರಾಹಕರು 19ರೂಪಾಯಿಯಿಂದ 31ರ ವೆರೆಗೆ ಪಾವತಿ ಮಾಡ್ಬೇಕಾಗುತ್ತೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಕುಮಾರ ಸ್ವಾಮಿ ʻಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ. ಬಲಿಷ್ಟರು, ಬಲ್ಲಿದರ ಆಡಂಬೋಲ. ಬಿಸ್ನೆಸ್ ಕ್ಲಾಸಿನ ಕಾಮಧೇನುʼ ಅಂತ ಬೊಮ್ಮಾಯಿ ಸರ್ಕಾರಕ್ಕೆ ಕುಟುಕಿದ್ದಾರೆ. ಅಲ್ದೇ ರಾಜ್ಯದಲ್ಲಿ ಮಳೆಯಾಗಿ ಜಲಾಶಯ ತುಂಬಿ ಎಲ್ಲವೂ ಸರಿಯಾಗಿದೆ. ಈಗ ಬೆಲೆ ಏರಿಕೆ ಮಾಡಿ ಚುನಾವಣೆ ಹತ್ತಿರ ಆಗ್ತಿದ್ದಂತೆ ಅದನ್ನ ಕಡಿಮೆ ಮಾಡೋ ಕುತಂತ್ರನಾ ಅಂತ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಈಗ ಸ್ವತಃ ರಾಜ್ಯ ಇಂಧನ ಸಚಿವ ಸುನೀಲ್‌ ಕುಮಾರ್‌ ಸ್ಪಷ್ಟನೆ ನೀಡಿದ್ದು ಯಾವುದೇ ಏರಿಕೆ ಇಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ವಿದ್ಯುತ್‌ ದರ ಹೆಚ್ಚಳಕ್ಕೆ ಯಾವುದೇ ಸೂಚನೆ ನೀಡಿಲ್ಲ. ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆ ಬೆಲೆಯಲ್ಲಿ ಮಾತ್ರ ವ್ಯತ್ಯಾಸವಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply