masthmagaa.com:

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಇವತ್ತು ಕರೆ ನೀಡಿದ್ದ ಭಾರತ್​ ಬಂದ್​ಗೆ ಹಲವು ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯ್ತು. ಬಂದ್ ಅನ್ನೋದಕ್ಕಿಂತ ಪ್ರತಿಭಟನೆ ಅಂತ ಹೇಳ್ಬೋದು. ಯಾಕಂದ್ರೆ ಬಂದ್ ಅಂತ ಹೇಳಿದ್ರೆ, ಬಸ್, ಕಾರು, ಆಟೋ ಯಾವ್ದೂ ಇರಲ್ಲ. ಆದ್ರೆ ಇವತ್ತು ಎಲ್ಲವೂ ಇತ್ತು. ರೈತರ  ಹೋರಾಟಕ್ಕೆ ಹಲವು ಸಂಘಟನೆಗಳು ಬೆಂಬಲ ನೀಡಿ ಪ್ರತಿಭಟನೆ ನಡೆಸಿದ್ದರಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಯ್ತು. ಆದ್ರೆ ಆಂಬ್ಯುಲೆನ್ಸ್​ ಬಂದಾಗ ಅದಕ್ಕೆ ಹೋಗಲು ಪ್ರತಿಭಟನಾಕಾರರು ದಾರಿ ಮಾಡಿಕೊಟ್ಟ ಘಟನೆಯೂ ನಡೀತು. ಇನ್ನು ನಾಳೆ ಕೂಡ ಬೆಂಗಳೂರಿನಲ್ಲಿ ರೈತರು ಮತ್ತು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಜೊತೆಗೆ ವಿಧಾನಸೌಧ ಮತ್ತು ರಾಜಭವನಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಮತ್ತೊಂದುಕಡೆ ದೆಹಲಿಯಲ್ಲೂ ಇವತ್ತು ರೈತರ ಪ್ರತಿಭಟನೆ ಜೋರಾಗಿತ್ತು. ಪ್ರತಿಭಟನಾಕಾರರನ್ನ ಭೇಟಿಯಾಗಲು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಹೋಗ್ತಾರೆ ಅನ್ನೋ ಕಾರಣಕ್ಕೆ ಅವರನ್ನ ಗೃಹ ಬಂಧನದಲ್ಲಿ ಇಡಲಾಯ್ತು ಅಂತ ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಆದ್ರೆ ದೆಹಲಿ ಪೊಲೀಸರು ಈ ಆರೋಪವನ್ನ ತಳ್ಳಿ ಹಾಕಿದ್ಧಾರೆ. ಕೆಲವೊಂದು ರಾಜ್ಯಗಳಲ್ಲಿ ಬಿಜೆಪಿ ಮತ್ತು ವಿಪಕ್ಷ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. ರೈತರ ಪ್ರತಿಭಟನೆಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೂಡ ಬೆಂಬಲ ಸೂಚಿಸಿ ಮಹಾರಾಷ್ಟ್ರದಲ್ಲಿ ಒಂದು ದಿನ ಉಪವಾಸಕ್ಕೆ ಕೂತಿದ್ದಾರೆ. ಇನ್ನು ನಾಳೆ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಇದಕ್ಕೂ ಮೊದಲೇ ಇವತ್ತು ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ನಿವಾಸದಲ್ಲಿ ರೈತ ಮುಖಂಡರನ್ನ ಮಾತುಕತೆಗೆ ಕರೆದಿದ್ದಾರೆ.

-masthmagaa.com

Contact Us for Advertisement

Leave a Reply