ಈ ದೇಶಗಳಲ್ಲಿ ಮುಗಿಯುವ ಹಂತದಲ್ಲಿದೆ ಲಸಿಕೆ ಅಭಿಯಾನ

masthmagaa.com:

ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಲಸಿಕೆ ಅಭಿಯಾನ ಜೋರಾಗಿ ನಡೀತಾ ಇದೆ. ಪ್ರಧಾನಿ ಸೇರಿದಂತೆ ಇಡೀ ಸರ್ಕಾರ ನಿಮ್ಮ ಸರದಿ ಬಂದಾಗ ಲಸಿಕೆ ಹಾಕಿಸಿಕೊಳ್ಳಿ ಅಂತ ಮನವಿ ಮಾಡ್ತಿದ್ದಾರೆ. ಆದ್ರೆ ಜಗತ್ತಿನ ಕೆಲ ಪುಟಾಣಿ ದೇಶಗಳು ಲಸಿಕೆ ಅಭಿಯಾನ ಮುಗಿಸೋ ಹಂತಕ್ಕೆ ಬಂದು ನಿಂತಿವೆ.. ಪಕ್ಕದ ಭೂತಾನ್​​​​​​ನಲ್ಲಿ ಈಗಾಗಲೇ ಶೇ.62ರಷ್ಟು ಜನರಿಗೆ ಲಸಿಕೆ ಹಾಕಿಯಾಗಿದೆ. ಮಾರ್ಚ್​ 27ರಿಂದ ಈವರೆಗೆ ಅಂದ್ರೆ 16 ದಿನಗಳಲ್ಲಿ ತನ್ನ ಶೇ.93ರಷ್ಟು ವಯಸ್ಕರಿಗೆ ಲಸಿಕೆ ಹಾಕಲಾಗಿದೆ. ಇಲ್ಲಿ ಒಟ್ಟು 8 ಲಕ್ಷ ಮಾತ್ರವೇ ಜನರಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಸೆಷಲ್ಸ್ ಮೊದಲ ಸ್ಥಾನದಲ್ಲಿದ್ದು ಅದು ಒಟ್ಟಾರೆ ಜನಸಂಖ್ಯೆಯ ಶೇ.66 ಪರ್ಸೆಂಟ್ ಜನರಿಗೆ ಈಗಾಗಲೇ ಲಸಿಕೆ ಹಾಕಿಯಾಗಿದೆ. ಇಲ್ಲಿರೋದು 1 ಲಕ್ಷ ಜನ ಮಾತ್ರ.. ಆದ್ರೆ ಒಂದು ಅಂಶ ಗಮನಿಸಬೇಕು.. ಕಡಿಮೆ ಜನಸಂಖ್ಯೆ ಅಂದ್ರೆ ಅಲ್ಲಿರೋ ಲಸಿಕೆ ಕೇಂದ್ರಗಳ ಸಂಖ್ಯೆನೂ ಕಡಿಮೆ ಇರುತ್ತೆ. ಲಸಿಕೆ ಹಾಕುವ ಸೌಲಭ್ಯ ಕೂಡ ಕಡಿಮೆ ಇರುತ್ತೆ..ಆದ್ರೂ ಕೂಡ ಈ ಪ್ರಮಾಣದಲ್ಲಿ ಲಸಿಕೆ ಹಾಕಿರೋದು ಮೆಚ್ಚಬೇಕಾದ ವಿಚಾರವೇ..

-masthmagaa.com

Contact Us for Advertisement

Leave a Reply