‘ಡ್ರಾಗನ್’ ಹಿಡಿಯಲು ಬಲೆ ಹಾಕಿದ ಜೋ ಬೈಡೆನ್!

masthmagaa.com:

ಪೆಂಟಗಾನ್.. ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಾಲಯ.. ಇಲ್ಲಿ ಈಗ ಚೀನಾವನ್ನ ಗುರಿಯಾಗಿಟ್ಟುಕೊಂಡು ಒಂದು ಟಾಸ್ಕ್​ ಫೋರ್ಸ್ ರಚಿಸಲಾಗಿದೆ. ಚೀನಾದ ಹಾರಾಟವನ್ನ ಕಡಿಮೆ ಮಾಡಲು, ನಿಯಂತ್ರಿಸಲು ಏನು ಮಾಡಬೇಕು ಅಂತ ಈ ಟಾಸ್ಕ್​ಫೋರ್ಸ್ ಪ್ಲಾನ್ ರೂಪಿಸಲಿದೆ. ಹಾಗೂ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್​ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಲಿದೆ. ಈ ವಿಚಾರವನ್ನ ಸ್ವತಃ ಅಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್ ಬಹಿರಂಗಪಡಿಸಿದ್ದಾರೆ. ಜೊತೆಗೆ ಇದು ಒಬ್ಬಿಬ್ಬರಿಂದ ಆಗೋ ಕೆಲಸ ಅಲ್ಲ. ಇದಕ್ಕೆ ಇಡೀ ಸರ್ಕಾರ, ಇಡೀ ವಿರೋಧ ಪಕ್ಷ, ಇಡೀ ಅಮೆರಿಕನ್ ಜನತೆ.. ಎಲ್ಲರೂ ಸೇರಿ ನನಗೆ ಸಹಕಾರ ಕೊಡಬೇಕು. ಆಗ ಮಾತ್ರ ಚೀನಾ ಜೊತೆಗಿನ ಈ ಕಾಂಪಿಟೇಷನ್ ಅನ್ನ ನಾವು ಗೆಲ್ಲಲು ಸಾಧ್ಯ ಅಂತ ಬೈಡೆನ್ ಹೇಳಿದ್ದಾರೆ. ಈ ಮೂಲಕ ವಿಶ್ವದ ಎರಡನೇ ಅತಿ ಶಕ್ತಿಶಾಲಿ ದೇಶವಾಗಿರೋ ಚೀನಾ ತನಗೆ ನೇರ ಎದುರಾಳಿ ಅಂತ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply