100 ದಿನ ಪೂರೈಸಿದ ಬೈಡೆನ್: ಜಾರ್ಜಿಯಾ ಜನತೆಗೆ ಸ್ಪೆಶಲ್ ಥ್ಯಾಂಕ್ಸ್

masthmagaa.com:

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕಾರ ವಹಿಸಿಕೊಂಡು 100 ದಿನ ಆಗಿದೆ. ಈ ಹಿನ್ನೆಲೆ ಕಾರ್ಯಕ್ರಮವೊಂದನ್ನ ಆಯೋಜಿಸಿ ತಮ್ಮನ್ನ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಹೇಳಿದ್ದಾರೆ ಬೈಡೆನ್​. ವಿಶೇಷವಾಗಿ ಜಾರ್ಜಿಯಾ ಮತದಾರರಿಗೆ. ಅಂದ್ಹಾಗೆ 1992ರಲ್ಲಿ ಡೆಮಾಕ್ರೆಟಿಕ್ ಪಕ್ಷದ ಬಿಲ್​ ಕ್ಲಿಂಟನ್ ಜಾರ್ಜಿಯಾ ರಾಜ್ಯವನ್ನ ಗೆದ್ದಿದ್ದರು. ಅದಾದ ಬಳಿಕ ಡೆಮಾಕ್ರೆಟಿಕ್ ಪಕ್ಷದಿಂದ ಯಾರೂ ಕೂಡ ಜಾರ್ಜಿಯಾ ರಾಜ್ಯವನ್ನ ಗೆದ್ದಿರಲಿಲ್ಲ. ಅದನ್ನ ಈ ಬಾರಿ ಮಾಡಿ ತೋರಿಸಿದ್ರು ಜೋ ಬೈಡೆನ್. ಹೀಗಾಗಿ ತಾವು ಅಧಿಕಾರ ವಹಿಸಿಕೊಂಡ 100 ದಿನ ಪೂರ್ಣಗೊಂಡ ಹಿನ್ನೆಲೆ ಜಾರ್ಜಿಯಾ ಜನತೆಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply