ನಿತೀಶ್ ಕುಮಾರ್ ಸಿಎಂ ಆಗಲ್ಲ: ಚಿರಾಗ್ ಪಾಸ್ವಾನ್​​

masthmagaa.com:

ಬಿಹಾರ: ನಿತೀಶ್ ಕುಮಾರ್ ಯಾವುದೇ ಕಾರಣಕ್ಕೂ ಸಿಎಂ ಆಗೋದಿಲ್ಲ ಅಂತ ಚಿರಾಗ್ ಪಾಸ್ವಾನ್ ಚಾಲೆಂಜ್ ಮಾಡಿದ್ದಾರೆ. ಬಿಹಾರ ವಿಧಾನಸಭೆಗೆ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮತ ಚಲಾಯಿಸಿ ಮಾತನಾಡಿದ ಚಿರಾಗ್​, ನಾನು ಬೇಕಾದ್ರೆ ಬರೆದು ಕೊಡ್ತೀನಿ.. ನವೆಂಬರ್ 10ರ ಬಳಿಕ ನಿತೀಶ್ ಕುಮಾರ್ ಸಿಎಂ ಆಗೋದಿಲ್ಲ. ನನಗೆ ಬಿಹಾರ ಮೊದಲು.. ಬಿಹಾರಿಗಳು ಮೊದಲು.. ನಾನು ಬಿಹಾರದ 4 ಲಕ್ಷ ಜನರಿಂದ ಸಂಗ್ರಹಿಸಿದ ಅಭಿಪ್ರಾಯಗಳ ಮೇಲೆ ಸಿದ್ಧಪಡಿಸಿದ ಯೋಜನೆಯಂತೆಯೇ ಕೆಲಸ ಮಾಡಲು ಬಯಸುತ್ತೇನೆ ಅಂತ ಹೇಳಿದ್ರು. ಇದಲ್ಲದೆ ಟ್ವೀಟ್ ಮೂಲಕ ಕಿಡಿಕಾರಿರುವ ಅವರು, ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ.. ರಾಜ್ಯ ಹಿಂದೆ ಉಳಿಯುತ್ತಿದೆ. ಬಿಹಾರದ ಜನರಿಗೆ ನಾವು ಬಿಹಾರಿಗಳು ಅಂತ ಹೇಳಿಕೊಳ್ಳಲು ಇಷ್ಟವಾಗುತ್ತಿಲ್ಲ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಮೊದಲ ಹಂತದ ಮತದಾನದಲ್ಲಿ ನಿತೀಶ್ ಕುಮಾರ್​ರನ್ನು ಜನ ತಿರಸ್ಕರಿಸಿದ್ದಾರೆ. ಉಳಿದವರು ಕೂಡ ನಿತೀಶ್ ಕುಮಾರ್ ರಹಿತ ಬಿಹಾರಕ್ಕೆ ಬೆಂಬಲಿಸಿ, ಅಭಿವೃದ್ಧಿಗೆ ಸಹಕರಿಸಬೇಕು ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply