ಪ್ರತಿಭಟನಾನಿರತ ಪೊಲೀಸ್ ಪರೀಕ್ಷಾರ್ಥಿಗಳಿಗೆ ಲಾಠಿ ಏಟು..ಜಲಪ್ರಯೋಗ..!

ಪೊಲೀಸ್​ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ರದ್ದು ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದ ಪರೀಕ್ಷಾರ್ಥಿಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಬಿಹಾರದ ಪಾಟ್ನಾದಲ್ಲಿರುವ ಸೈನ್ಸ್ ಕಾಲೇಜು ಬಳಿ ಪ್ರತಿಭಟನೆ ನಡೆಸ್ತಿದ್ರು. ಪ್ರಶ್ನೆ ಪತ್ರಿಕೆ ಲೀಕ್ ಬಗ್ಗೆ ಸಿಬಿಐ ತನಿಖೆ ನಡೆಸಿ ಪರೀಕ್ಷೆಯನ್ನ ರದ್ದು ಮಾಡಿ ಎಂದು ಆಗ್ರಹಿಸ್ತಿದ್ರು. ಪ್ರತಿಭಟನೆ ತೀವ್ರಗೊಂಡ ಹಿನ್ನೆ ಲೆ ಪೊಲೀಸರು ಜಲಫಿರಂಗಿ ಬಳಸಿ, ಲಾಠಿಚಾರ್ಜ್​ ನಡೆಸಿದ್ದಾರೆ. ಸಿಕ್ಕಸಿಕ್ಕ ಪ್ರತಿಭಟನಾಕಾರರ ಮೇಲೆ ಅಮಾನವೀಯ ರೀತಿಯಲ್ಲಿ ಹೊಡೆದು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. 6 ಲಕ್ಷ ಮಂದಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು.

Contact Us for Advertisement

Leave a Reply