ಕೊರೋನಾ ನಡುವೆಯೇ ರಾಜ್ಯದಲ್ಲಿ ಹಕ್ಕಿ ಜ್ವರ ಹಾವಳಿ..?

masthmagaa.com

ಕೊರೋನಾ ಭೀತಿಯಲ್ಲಿರುವ ಮೈಸೂರು ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ ಸೋಮವಾರ ಮೃತಪಟ್ಟ ಕೊಕ್ಕರೆಗಳಲ್ಲಿ ಹಕ್ಕಿಜ್ವರ ದೃಢವಾಗಿದ್ದು ಲ್ಯಾಬ್ ವರದಿಯಲ್ಲಿ ಬಹಿರಂಗವಾಗಿದೆ. ಹೀಗಾಗಿ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದ್ದು, ಕೋಳಿ ಮಾರಾಟವನ್ನು ಸಂಪೂರ್ಣ ಬಂದ್ ಮಾಡುವಂತೆ ಆದೇಶ ಹೊರಡಿಸಿದೆ.

ಕುಂಬಾರಕೊಪ್ಪಲು ಸುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಮಾರಾಟ ಬಂದ್ ಆಗಿದೆ. ಕೋಳಿಜ್ವರ ಕಾಣಿಸಿಕೊಂಡಿರುವ ಕುಂಬಾರಕೊಪ್ಪಲು ಸುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿಗಳನ್ನು ತಿನ್ನುವಂತಿಲ್ಲ, ಯಾವುದೇ ಪಕ್ಷಿಗಳನ್ನು ಸಾಕುವಂತೆಯೂ ಇಲ್ಲ. ಇನ್ನು ಪಕ್ಷಿಗಳಿಂದ ಪಕ್ಷಿಗಳಿಗೆ ಹಕ್ಕಿ ಜ್ವರ ಹರಡೋದ್ರಿಂದ ಎಲ್ಲಾ ಪಕ್ಷಿಗಳನ್ನು ಸಾಯಿಸಲು ಇಂದಿನಿಂದ ಕಿಲ್ಲಿಂಗ್ ಆಪರೇಷನ್ ಗೆ ಜಿಲ್ಲಾಡಳಿತ ಆದೇಶಿಸಿದೆ.

ಕೇವಲ ಕೋಳಿ ಮಾತ್ರವಲ್ಲದೆ ಗಿಳಿ, ಪಾರಿವಾಳ, ಲವ್ ಬರ್ಡ್ಸ್, ಬಾತುಕೋಳಿ, ಕೊಕ್ಕರೆ, ಸೇರಿದಂತೆ ಯಾವುದೇ ಪಕ್ಷಿಗಳನ್ನು ಸಾಕಿದ್ದರೂ ಸಾಯಿಸಬೇಕು. ಪಕ್ಷಿಗಳನ್ನ ಸಂರಕ್ಷಿಸುವ ಪ್ರಯತ್ನ ಮಾಡಲೇಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇನ್ನು ಕುಕ್ಕರಳ್ಳಿ ಕೆರೆ ಹಾಗೂ ಮಾನಸ ಗಂಗೋತ್ರಿ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಮತ್ತೊಂದ್ಕಡೆ ಕೊರೋನಾ ಭೀತಿ ಹಿನ್ನೆಯಲ್ಲಿ ಜಿಲ್ಲೆಯಲ್ಲಿ 144/3 ಸೆಕ್ಷನ್ ಜಾರಿ ಮಾಡಿದ್ದು, ಯಾವುದೇ ಉತ್ಸವ, ಸಭೆ- ಸಮಾರಂಭ ಮಾಡುವಂತಿಲ್ಲ. ಮುಂದಿನ ಆದೇಶವರೆಗೂ 144/3 ಸೆಕ್ಷನ್ ಜಾರಿಯಲ್ಲಿರಲಿದೆ.

masthmagaa.com

Contact Us for Advertisement

Leave a Reply