ಭಾವಿ ಪತ್ನಿಗೆ ಬರ್ತ್‌ಡೇ ಸರ್ಪ್ರೈಸ್‌ ಕೊಟ್ಟ ಜ್ಯೂನಿಯರ್‌ ಅಂಬಿ

masthmagaa.com:

ಚೈಲ್ಡಹುಡ್‌ ಮತ್ತು ಕ್ಯೂಟ್‌ ಫೋಟೊಗಳನ್ನ ಶೇರ್‌ ಮಾಡಿ ತನ್ನ ಭಾವಿ ಪತ್ನಿಗೆ ಅಭಿಷೇಕ್‌ ಅಂಬರೀಷ್‌ ಹುಟ್ಟುಹಬ್ಬದ ವಿಶ್‌ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾರ ನಿಶ್ಚಿತಾರ್ಥ ಡಿಸೆಂಬರ್ 11 ರಂದು ಬೆಂಗಳೂರಿನಲ್ಲಿ ನಡೆದಿತ್ತು.

ನಟ ಯಶ್, ದರ್ಶನ್ ಸೇರಿದಂತೆ ಚಿತ್ರರಂಗದ ಕೆಲವರಷ್ಟೆ ಆಹ್ವಾನವಿತ್ತು. ಸ್ವತಃ ಫ್ಯಾಷನ್‌ ಡಿಸೈನರ್‌ ಆಗಿರುವ ಅವಿವಾ ಫ್ಯಾಷನ್‌ ಡಿಸೈನಿಂಗ್‌ ಸಂಸ್ಥೆಯೊಂದನ್ನ ನಡೆಸುತ್ತಿದ್ದಾರೆ.

ಮಾರ್ಚ್‌ 6 ಅಂದ್ರೆ ಇವತ್ತು ಅವಿವಾರ ಹುಟ್ಟುಹಬ್ಬ ಹಾಗಾಗಿ
ಅಭಿಷೇಕ್ ಹಾಗೂ ಅವಿವಾ ವಿದೇಶ ಪ್ರವಾಸಕ್ಕೆ ಹೋದಾಗಿನ ಫೋಟೊ, ಇಬ್ಬರೂ ಒಟ್ಟಿಗಿರುವ ಹಳೆಯ ಫೋಟೊ, ಅವಿವಾರ ಬಾಲ್ಯದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ಹಂಚಿಕೊಂಡಿದ್ದು ”ನಾನು ನಿನ್ನನ್ನು ಪಡೆದುಕೊಂಡು ಬಿಟ್ಟೆ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು, ಅದ್ಭುತವಾದ ವರ್ಷ ನಿನ್ನದಾಗಲಿ, ಮುಂದೆ ಬರುವ ಎಲ್ಲದಕ್ಕೂ ನಾನು ಕಾತರನಾಗಿದ್ದೇನೆ. ದೇವರು ನಿನಗೆ ಒಳ್ಳೆಯದು ಮಾಡಲಿ ಲಿಟಲ್ ಕ್ಯೂಟಿ” ಎಂದು ವಿಶ್ ಮಾಡಿದ್ದಾರೆ. ಇವರ ಮದುವೆ ವಿಚಾರ ಎಲ್ಲೆಡೆ ಸುದ್ದಿ ಆಗ್ತಾ ಇದೆ. ಎಂಗೇಜ್‌ಮೆಂಟ್‌ ಕೂಡ ಹಾಗೇ ಆಗಿತ್ತು. ಸದ್ಯಕ್ಕೆ ಇಲ್ಲಾ, ಇಲ್ಲಾ ಅಂತಾನೆ ಎಂಗೇಜ್‌ಮೆಂಟ್‌ ಮುಗಿಸಿದ್ರು. ಮದುವೆ ಯಾವಾಗ ಎನೂ ಅನ್ನೋದು ಎಲ್ಲೂ ಪ್ರಸ್ತಾಪ ಆಗಿಲ್ಲ.

-masthmagaa.com

 

Contact Us for Advertisement

Leave a Reply