ಸಿಂಗ್​​, ರಘುರಾಮ್ ಅವಧಿಯಲ್ಲಿ ಸರ್ಕಾರಿ ಬ್ಯಾಂಕ್​ಗಳು ಪಾತಾಳಕ್ಕೆ: ನಿರ್ಮಲಾ

ನ್ಯೂಯಾರ್ಕ್​​​: ಮನಮೋಹನ್ ಸಿಂಗ್ ಪ್ರಧಾನಿ ಮತ್ತು ರಘುರಾಮ್ ರಾಜನ್ ಆರ್​​ಬಿಐ ಗವರ್ನರ್​​​​ ಆಗಿದ್ದಾಗ ಸಾರ್ವಜನಿಕ ವಲಯದ ಬ್ಯಾಂಕ್​ಗಳು ಕೆಟ್ಟ ಸ್ಥಿತಿಗೆ ತಲುಪಿತ್ತು ಅಂತ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ಧಾರೆ. ನ್ಯೂಯಾರ್ಕ್​​ನ ಕೊಲಂಬಿಯಾ ಯೂನಿವರ್ಸಿಟಿಯ ಇಂಟರ್​​ನ್ಯಾಷನಲ್ & ಪಬ್ಲಿಕ್ ಅಫೇರ್ಸ್​ ಶಾಲೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ವಲಯದ ಎಲ್ಲಾ ಬ್ಯಾಂಕ್​​ಗಳಿಗೆ ಲೈಫ್​ಲೈನ್ ನೀಡೋದು ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ಧಾರೆ.

ರಘುರಾಮ್ ರಾಜನ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ನನಗೆ ತುಂಬಾ ಗೌರವ ಇದೆ. ಅರ್ಥ ವ್ಯವಸ್ಥೆಯ ಬಗ್ಗೆ ಅವರು ತುಂಬಾ ತಿಳಿದುಕೊಂಡಿದ್ದಾರೆ. ಭಾರತದ ಅರ್ಥವ್ಯವಸ್ಥೆ ಕೆಟ್ಟ ಸ್ಥಿತಿಯಲ್ಲಿದ್ದಾಗ ಅವರನ್ನು ಆರ್​​ಬಿಐ ಗವರ್ನರ್ ಆಗಿ ಆಯ್ಕೆ ಮಾಡಲಾಗಿತ್ತು. ರಘುರಾಮ್ ರಾಜನ್ ಅವಧಿಯಲ್ಲಿ ಭಾರತದಲ್ಲಿ ರಾಜಕೀಯ ನಾಯಕರು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್​​ಗಳ ಕೇವಲ ಒಂದೇ ಒಂದು ಫೋನ್​ಗೆಲ್ಲಾ ಸಾಲ ನೀಡಲಾಯ್ತು. ಇದರಿಂದ ನಮಗೆ ಇನ್ನೂ ಹೊರಬರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಮಾತನಾಡಿದ್ದ ರಘುರಾಮ್ ರಾಜನ್, ಪ್ರಧಾನಿ ಮೋದಿಯವರ ಮೊದಲ ಅವಧಿಯಲ್ಲಿ ಅರ್ಥವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡಲಿಲ್ಲ. ಅರ್ಥವ್ಯವಸ್ಥೆಯನ್ನು ಉತ್ತಮಪಡಿಸುವ ಯಾವುದೇ ಗುರಿ ಕೂಡ ಇರಲಿಲ್ಲ ಎಂದಿದ್ದರು.

Contact Us for Advertisement

Leave a Reply