ಬಿಜೆಪಿಯೊಳಗೆ ಶುರುವಾಗಿದ್ಯಾ ಅಂತರ್ಯುದ್ಧ..! ಮುಂದೇನು..?

ಬಿಜೆಪಿ ಒಳಗೆ ಹೊಸ ಅಂತರ್ಯುದ್ಧ ಶುರುವಾಗಿದೆ..! ಈ ಅಂತರ್ಯುದ್ಧ ರಾಜ್ಯದಲ್ಲಿ ಬಿಜೆಪಿಯನ್ನು ಮುಗಿಸುವ ಹಂತಕ್ಕೆ ಹೋಗುವ ಎಲ್ಲಾ ಅಪಾಯಗಳು ಕಾಣಿಸುತ್ತಿವೆ. ಈಗಾಗಲೇ ಬರುತ್ತಿರುವ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ಏನಿದು ಬಿಜೆಪಿ ಅಂತರ್ಯುದ್ಧ? ಇಲ್ಲಿ ಮಿತ್ರರು ಯಾರು? ಶತ್ರುಗಳು ಯಾರು? ರಾಜ್ಯ ರಾಜಕಾರಣದ ಈ ರೋಚಕ ದಾಯಾದಿ ಮಹಾಭಾರತದ ಸ್ಟೋರಿಯನ್ನು ನೋಡ್ತಾ ಹೋಗೋಣ.

ಯಡಿಯೂರಪ್ಪ ಗ್ಯಾಂಗಿನ ಗೆರಿಲ್ಲಾ ಯುದ್ಧ!
ಹೌದು ಫ್ರೆಂಡ್ಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರವನ್ನು ನಡೆಸುತ್ತಿದ್ದಾರೆ. ಆದ್ರೆ ಪಾರ್ಟಿಯಲ್ಲಿ ಅವರ ಮಾತು ಮೊದಲಿನಷ್ಟು ಈಗ ನಡೆಯುತ್ತಿಲ್ಲ. ಈ ಮೊದಲು ಅಧಿಕಾರದಲ್ಲಿ ಇರಲಿ ಇಲ್ಲದೇ ಇರಲಿ, ಸರ್ಕಾರ ಹಾಗೂ ಪಕ್ಷ ಎರಡರಲ್ಲೂ ಯಡಿಯೂರಪ್ಪ ಅವರ ಮಾತೇ ಅಂತಿಮವಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸರ್ಕಾರದಲ್ಲಿ ಮೂವರು ಡಿಸಿಎಂ ಗಳನ್ನು ಇಟ್ಟು ಯಡಿಯೂರಪ್ಪ ಸುತ್ತ 3 ಪವಸೆರ್ಂಟರ್ ಗಳನ್ನು ಸೃಷ್ಟಿ ಮಾಡಲಾಗಿದೆ. ಆ ಮೂಲಕ ಯಡಿಯೂರಪ್ಪ ನಿವೃತ್ತಿಯಾದ ಬಳಿಕ ಹೊಸ ನಾಯಕರನ್ನು ಸೃಷ್ಟಿ ಮಾಡಬೇಕು ಅಂತ ಬಿಜೆಪಿ ನಾಯಕರು ಈಗಿನಿಂದಲೇ ತಯಾರಿ ಆರಂಭ ಮಾಡಿದ್ದಾರೆ. ಮತ್ತೊಂದು ಕಡೆ ಪಕ್ಷದಲ್ಲಿ ನಳಿನ್ ಕುಮಾರ್ ಕಟೀಲ್ ನೇಮಕದ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಕಂಪ್ಲಿಟ್ ನಿಯಂತ್ರಣ ತೆಗೆದುಕೊಂಡಿದ್ದಾರೆ. ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಸಂತೋಷ್ ಜಿ ಮಾತೇ ಫೈನಲ್ ಆಗುತ್ತಿದೆ.

ಎಲ್ಲ ಬೆಳವಣಿಗೆಗಳನ್ನು ನೋಡಿ ಯಡಿಯೂರಪ್ಪ ತಲೆಕೆಡಿಸಿಕೊಂಡಿಲ್ಲ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಚೆನ್ನಾಗಿ ಗೊತ್ತು ಬಿಜೆಪಿಗೆ ನಾನು ಸಾಕಷ್ಟು ಕೊಟ್ಟಿದ್ದೇನೆ. ಅಟ್ ದಿ ಸೇಮ್ ಟೈಮ್ ನಾನು ಇಷ್ಟು ಉನ್ನತ ಮಟ್ಟಕ್ಕೆ ಏರಲು ಬಿಜೆಪಿಯ ಕೊಡುಗೆಯೂ ಸಾಕಷ್ಟಿದೆ ಅಂತ. ಜೊತೆಗೆ ತಮ್ಮ ನಿವೃತ್ತಿ ಸಮಯವು ಹತ್ತಿರ ಬಂದಿದೆ ಅನ್ನೋದು ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಇರುವ ಅವಕಾಶದಲ್ಲಿ ಒಳ್ಳೆ ಹೆಸರು ತೆಗೆದುಕೊಂಡು ಹೋಗಬೇಕು ಅನ್ನೋ ಆಸೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ತಮ್ಮ ಆಟ ಶುರುಮಾಡಲು ಕಾದು ಕೂತಿದ್ದ ಅವರ ಹಿಂಬಾಲಕರ ಪಡೆ ಮಾತ್ರ ಈಗ ಬೆಚ್ಚಿ ಬಿದ್ದಿದೆ. ಯಾಕಂದ್ರೆ ಈಗ ಮೊದಲಿನ ಹಾಗೆ ಏನೂ ನಡೆಯುತ್ತಿಲ್ಲ. ಯಡಿಯೂರಪ್ಪ ಪಕ್ಷದ ಗೆರೆಯನ್ನ ದಾಟಿ ಏನನ್ನೂ ಮಾಡುತ್ತಿಲ್ಲ. ಪ್ರಮುಖ ನೇಮಕಾತಿಗಳು ಸಂತೋಷ್ ಜೀ ಮತ್ತು ನಳಿನ್ ಕುಮಾರ್ ಕಟೀಲ್ ಹೇಳಿದಂತೆ ಆಗುತ್ತಿದೆ. ಹೀಗಾಗಿ ಇವರೆಲ್ಲ ಈಗ ಕುಪಿತಗೊಂಡಿದ್ದಾರೆ. ಬುಸು ಬುಸು ಅಂತ ಬಸುಗುಡುತ್ತಿದ್ದಾರೆ. ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿರುವ ಭೀಮಶಂಕರ್ ಪಾಟೀಲ್ ಅಂತೂ ನಳಿನ್ ಕುಮಾರ್ ಕಟೀಲ್ ಮತ್ತು ಸಂತೋಷ್ ವಿರುದ್ಧ ಪತ್ರ ಬರೆದು ಅಕಟಕಟಾ ಎಂದಿದ್ದಾರೆ. ಹೀಗೆ ಮುಂದುವರೆದರೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಎಲ್ಲರೂ ರಾಜೀನಾಮೆ ಕೊಡುತ್ತೇನೆ ಅಂತ ಬೆದರಿಕೆ ಹಾಕಿದ್ದಾರೆ.

ಕಾಂಗ್ರೆಸ್ ಕೂಡ ಇದನ್ನ ಅವಕಾಶವಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ಲಿಂಗಾಯತ ನಾಯಕ ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡುತ್ತಿದೆ ಅಂತ ಹೇಳುವ ಮೂಲಕ ಉಪ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಕೂಡ ಪ್ರಯತ್ನಪಡುತ್ತಿದೆ. ಇದನ್ನೆಲ್ಲ ನೋಡುತ್ತಿರುವ ಬಿಜೆಪಿ ಹೈಕಮಾಂಡ್ ಮುಂದೇನು ಮಾಡಬಹುದು ಅಂತ ಯೋಚನೆ ಮಾಡುತ್ತಿದೆ. ಇಷ್ಟಕ್ಕೆ ಎಲ್ಲವೂ ತಣ್ಣಗಾದರೆ ಓಕೆ. ಅದು ಬಿಟ್ಟು ಇದೆಲ್ಲ ಹೀಗೆ ಮುಂದುವರಿದರೆ ಪಕ್ಷಕ್ಕೆ ಡ್ಯಾಮೇಜ್ ಆಗೋದು ಗ್ಯಾರಂಟಿ. ಅಂತಹ ಸಂದರ್ಭ ಬಂದರೆ ಹೈಕಮಾಂಡ್ ಮಧ್ಯ ಪ್ರವೇಶ ಮಾಡಬಹುದು. ಯಡಿಯೂರಪ್ಪನವರನ್ನ ಕರೆದು ಅವರನ್ನು ಸಮಾಧಾನಪಡಿಸಿ, ನಿಮ್ಮ ಬೆಂಬಲಿಗರಿಗೆ ಬಾಯಿ ಮುಚ್ಚುವಂತೆ ತಾಕೀತು ಮಾಡಿ ಅಂತ ಹೇಳಬಹುದು. ಆದರೆ ಇಲ್ಲಿ ಯಡಿಯೂರಪ್ಪ ಅಂತಿಮವಾಗಿ ಏನು ಯೋಚನೆ ಮಾಡುತ್ತಿದ್ದಾರೆ ಅನ್ನೋದು ಮುಖ್ಯವಾಗುತ್ತೆ. ಯಡಿಯೂರಪ್ಪ ಕೂಡ ತಮ್ಮ ರಾಜಕೀಯ ಜೀವನದ ಇಳಿಜಾರಿನ ಈ ಹಂತದಲ್ಲಿ ಬಂಡಾಯದ ಬಾವೂಟ ಹಾರಿಸಿದರೆ ಇಬ್ಬರಿಗೂ ಬಹಳ ಕಷ್ಟ. ಬಿಜೆಪಿಗೂ ಕಷ್ಟ. ಯಡಿಯೂರಪ್ಪಗೂ ಬಹಳ ಕಷ್ಟ!

Contact Us for Advertisement

Leave a Reply