ಉತ್ತರ ಪ್ರದೇಶದಲ್ಲಿ ಒಂದು ವಾರದಲ್ಲಿ 3 ಬಿಜೆಪಿಗರ ಕಗ್ಗೊಲೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕನನ್ನು ಕೊಲೆ ಮಾಡಲಾಗಿದೆ. ಒಂದು ವಾರದಲ್ಲಿ ನಡೆದ 3ನೇ ಕೊಲೆ ಇದಾಗಿದೆ. 47 ವರ್ಷದ ಬಿಜೆಪಿ ಕಾರ್ಪೊರೇಟರ್ ಧಾರಾ ಸಿಂಗ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ. ಸ್ಥಳೀಯ ಸಕ್ಕರೆ ಕಾರ್ಖಾನೆಯಲ್ಲಿ ಮೇಲ್ವಿಚಾರಕರಾಗಿಯೂ ಅವರು ಕೆಲಸ ಮಾಡುತ್ತಿದ್ದರು. ನಿನ್ನೆ ಸಹರನ್ ಪುರದ ದಿಯೋಬಂದ್ ನಿಂದ ಇವರು ಕೆಲಸಕ್ಕಾಗಿ ಹೊರಟಿದ್ದರು. ಈ ವೇಳೆ ಬೈಕ್‍ನಲ್ಲಿ ಬಂದು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಧಾರಾಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಕ್ಟೋಬರ್ 8ರಂದು ದಿಯೋಬಂದ್‍ನಲ್ಲಿ ಇದೇ ರೀತಿ ಬಿಜೆಪಿ ನಾಯಕ ಚೌಧರಿ ಯಶ್ ಪಾಲ್ ಸಿಂಗ್ ಅವರನ್ನು ಕೊಲೆ ಮಾಡಲಾಗಿತ್ತು. ಅದಕ್ಕೂ 2 ದಿನ ಮುನ್ನ ಬಸ್ತಿಯಲ್ಲಿ ಬಿಜೆಪಿ ನಾಯಕ ಕಬೀರ್ ತಿವಾರಿಯವರನ್ನು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದರು.

Contact Us for Advertisement

Leave a Reply