ಸ್ಪೀಕರ್‌ ವಿರುದ್ದ ಅವಹೇಳನಕಾರಿ ಮಾತು ಕೇಸ್! ತೆಲಂಗಾಣದ ಬಿಜೆಪಿ ಶಾಸಕ ಅಮಾನತು!

masthmagaa.com:

ಸ್ಪೀಕರ್‌ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ರು ಅಂತ ತೆಲಂಗಾಣದ ಬಿಜೆಪಿ ಶಾಸಕ ಏತಾಳಾ ರಾಜೇಂದ್ರರನ್ನ ಅಮಾನತು ಮಾಡಲಾಗಿದೆ. ಈ ಮೂಲಕ ತೆಲಂಗಾಣದ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಅಧಿವೇಶನದ ವೇಳೆ ಸ್ಪೀಕರ್‌ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ರು ಅಂತೇಳಿ ತೆಲಂಗಾಣ ಸಚಿವ ವೇಮುಲ ಪ್ರಶಾಂತ್‌ ರೆಡ್ಡಿ ಏತಾಳಾ ವಿರುದ್ದ ನಿಲುವಳಿ ಮಂಡಿಸಿದ್ರು. ಇದರ ಬೆನ್ನಲ್ಲೇ ಸ್ಪೀಕರ್‌, ಬಿಜೆಪಿ ಶಾಸಕನನ್ನಅಧಿವೇಶನ ಮುಗಿಯೋವರೆಗೂ ಸಸ್ಪೆಂಡ್‌ ಮಾಡಿದೆ. ಅಂದ್ಹಾಗೆ 119 ವಿಧಾನಸಭಾ ಸ್ಥಾನಗಳ ಪೈಕಿ 103 ಸ್ಥಾನಗಳು TRS ಪಕ್ಷದ್ದಾದ್ರೆ, ಕಾಂಗ್ರೆಸ್‌, AIMIM ಮತ್ತು ಪಕ್ಷೇತರ ಅಭ್ಯರ್ಥಿ ಕ್ರಮವಾಗಿ 7,5,1 ಸ್ಥಾನಗಳನ್ನ ಹೊಂದಿದೆ. ಬಿಜೆಪಿ ಕೂಡ ಎರಡು ಸದಸ್ಯ ಸ್ಥಾನ ಹೊಂದಿತ್ತು. ಆದ್ರೆ ಪ್ರವಾದಿ ವಿರುದ್ದ ಮಾತನಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ರಾಜಾಸಿಂಗ್‌ ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply