ಸಮಾವೇಶದಲ್ಲಿ ತಲೆ ತಿರುಗಿಬಿದ್ದ ಪಂಕಜಾ ಮುಂಡೆ..!

ಪರೇಲಿ: ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜಾ ಮುಂಡೆ ಚುನಾವಣಾ ರ್ಯಾಲಿಯಲ್ಲಿ ತಲೆ ತಿರುಗಿ ಬಿದ್ದಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಚುನಾವಣೆ ಸಮಾವೇಶ ನಡೆಯುತ್ತಿತ್ತು. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆಯಲ್ಲಿ ಪಂಕಜಾ ಮುಂಡೆ ತಮ್ಮ ಸಹೋದರ, ಎನ್​​ಸಿಪಿ ನಾಯಕ ಧನಂಜಯ್ ಮುಂಡೆಯವರ ವಿರುದ್ಧ ಕಣಕ್ಕಿಳಿದಿದ್ದಾರೆ. ಬಹಿರಂಗ ಪ್ರಚಾರದ ಅಂತಿಮ ದಿನವಾದ ನಿನ್ನೆ 5ನೇ ರ್ಯಾಲಿ ಮಾಡುವಾಗ ಈ ಘಟನೆ ನಡೆದಿದೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮುಂಡೆ ಕುಟುಂಬ ಅತ್ಯಂತ ಹೈಪ್ರೊಫೈಲ್ ಕುಟುಂಬವಾಗಿದೆ.

Contact Us for Advertisement

Leave a Reply