75 ದಿನಗಳ ಹಿಂದೆ ಡ್ಯಾಮ್​​ಗೆ ಬಿದ್ದಿದ್ದ ಯೋಧನ ಶವ ಪತ್ತೆ!

masthmagaa.com:

ಪಂಜಾಬ್​​​​ನ ಪಠಾಣ್​​ಕೋಟ್​ ಜಿಲ್ಲೆಯ ರಂಜಿತ್ ಸಾಗರ್ ಡ್ಯಾಂನಲ್ಲಿ ಹೆಲಿಕಾಪ್ಟರ್ ಪತನದ ವೇಳೆ ನಾಪತ್ತೆಯಾಗಿದ್ದ ಯೋಧನನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ. ಆಗಸ್ಟ್ 3ರಂದು ಈ ದುರಂತ ಸಂಭವಿಸಿತ್ತು. ಹೆಲಿಕಾಪ್ಟರ್​ನಲ್ಲಿ ಇಬ್ಬರು ಯೋಧರಿದ್ರು. 12 ದಿನಗಳ ಶೋಧಕಾರ್ಯ ಬಳಿಕ ಲೆಫ್ಟಿನೆಂಟ್ ಕರ್ನಲ್ ಎಎಸ್ ಭಟ್ ಅವರ ಪಾರ್ಥಿವ ಶರೀರ ಪತ್ತೆಯಾಗಿತ್ತು. ಆದ್ರೆ ಮತ್ತೋರ್ವ ಪೈಲಟ್ ಕ್ಯಾಪ್ಟನ್ ಜಯಂತ್ ಜೋಶಿ ಪಾರ್ಥಿವ ಶರೀರ ಸಿಕ್ಕಿರಲಿಲ್ಲ. 75 ದಿನಗಳಿಂದಲೂ ಶೋಧಕಾರ್ಯ ನಡೆಯುತ್ತಲೇ ಇತ್ತು. ಇದೀಗ 65ರಿಂದ 70 ಮೀಟರ್ ಆಳದಲ್ಲಿ ಶೋಧಕಾರ್ಯ ನಡೆಸುವಾಗ ಮೃತದೇಹ ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply