ಗೂಗ್ಲಿ ಬೆಡಗಿ ಕೃತಿ ವಸ್ತುಗಳು ನಾಪತ್ತೆ: ಏರ್ ಇಂಡಿಯಾ ವಿರುದ್ಧ ಕಿಡಿ

ಗೂಗ್ಲಿ ಬೆಡಗಿ ಕೃತಿ ಕರಬಂದ ಅವರ ವಸ್ತುಗಳು ನಾಪತ್ತೆಯಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಕೃತಿ ಕರಬಂದ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಮತ್ತೆ ನನ್ನ ವಸ್ತುಗಳನ್ನು ಕಳೆದು ಹೋಗಿರೋದಕ್ಕೆ ಧನ್ಯವಾದಗಳು. ನೀವು ನಿಮ್ಮ ಸಿಬ್ಬಂದಿಗೆ ಕೆಲವೊಂದು ಶಿಷ್ಟಾಚಾರಗಳನ್ನು ಕಲಿಸಬೇಕಿದೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ದಯವಿಟ್ಟು ನಮ್ಮನ್ನು ಕ್ಷಮಿಸಿ. ದಯವಿಟ್ಟು ನಿಮ್ಮ ಫೈಲ್​​ನ ರೆಫರೆನ್ಸ್ ನಂಬರ್ ಮತ್ತು ಬ್ಯಾಗೇಜ್​ನ ಟ್ಯಾಗ್ ನಂಬರ್​ನ್ನು ನಮಗೆ ಕಳುಹಿಸಿಕೊಡಿ. ನಿಮ್ಮ ಬ್ಯಾಗನ್ನು ಚೆಕ್ ಮಾಡ್ತೀವಿ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕರಬಂದ, ನಾನು ನಿಮ್ಮ ಕ್ಷಮೆಯಾಚನೆಯನ್ನು ಸ್ವೀಕರಿಸಲು ಬಯಸುತ್ತೇನೆ. ಆದ್ರೆ ದುರದೃಷ್ಟವಶಾತ್ ನನ್ನ ಬ್ಯಾಗ್‌ನ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ನಿಮ್ಮ ಬ್ಯಾಗ್ ಇಂದು ಮುಂಬೈನಿಂದ ಗೋವಾ ಏರ್​ಪೋರ್ಟ್​ ತಲುಪಿದ್ದು, ಡೆಲಿವರಿಗಾಗಿ ವಿಳಾಸ ಮತ್ತು ನಂಬರ್ ನೀಡಬೇಕೆಂದು ಮನವಿ ಮಾಡಿದೆ.

ಏರ್ ಇಂಡಿಯಾ ಜೊತೆ ಕೃತಿಯ ವಿವಾದ ಆಗಿರೋದು ಇದೇ ಮೊದಲ ಬಾರಿಗೆ ಅಲ್ಲ. 2014ರಲ್ಲಿ ಏರ್ ಇಂಡಿಯಾ ಸಿಬ್ಬಂದಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಅಂತ ಕೃತಿ ಕರಬಂದ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

Contact Us for Advertisement

Leave a Reply