ಬಾಂಬ್ ಹೊತ್ತು ಬಂದು ಸೌದಿಯಲ್ಲಿ ಬಿದ್ದ ಡ್ರೋನ್!

masthmagaa.com:

ಸೌದಿ ಗಡಿಯ ಸಿಟಿ ಆಸಿರ್​ನಲ್ಲಿ ಬಾಂಬ್ ತುಂಬಿದ ಡ್ರೋನ್ ಬಂದು ಬಿದ್ದಿದೆ. ಇದ್ರ ಹಿಂದೆ ಯೆಮನ್​​ನ ಹೌತಿ ಬಂಡುಕೋರರ ಕೈವಾಡವಿದೆ. ಆದ್ರೂ ದಾಳಿಯಲ್ಲಿ ಯಾರಿಗೂ ಏನೂ ಹಾನಿಯಾಗಿಲ್ಲ ಅಂತ ಸೌದಿ ಅರೇಬಿಯಾ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. 2014ರ ಸೆಪ್ಟೆಂಬರ್​​ನಲ್ಲಿ ಯೆಮನ್​​ನ ರಾಜಧಾನಿ ಸನಾವನ್ನು ಹೌತಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ರು. ಹೀಗಾಗಿ ಯೆಮನ್ ಸರ್ಕಾರಕ್ಕೆ ಸೌದಿ ಅರೇಬಿಯಾ ಬೆಂಬಲ ನೀಡ್ತಾ ಬರ್ತಿದೆ. ಹೀಗಾಗಿ ಹೌತಿಗಳು ಆಗಾಗ ಒಂದೊಂದು ರಾಕೆಟ್ಟನ್ನು ಸೌದಿ ಮೇಲೆ ಉಡಾಯಿಸ್ತಾ ಇರ್ತಾರೆ. ಅದೇ ರೀತಿ ಈಗ ಡ್ರೋನ್​​ನಲ್ಲಿ ಬಾಂಬ್ ತುಂಬಿ ಕಳುಹಿಸಿದ್ದಾರೆ.

-masthmagaa.com

Contact Us for Advertisement

Leave a Reply