ತಲಾಖ್ ಬಳಿಕ ಅಶ್ಲೀಲ ವಿಡಿಯೋ ಹರಿಬಿಟ್ಟ ಪತಿ: ಪತ್ನಿ ಸೂಸೈಡ್

masthmagaa.com:

ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ 25 ವರ್ಷದ ಮಹಿಳೆಗೆ ತಲಾಖ್ ನೀಡಿದ್ದ ಪತಿ, ಆಕೆಯ ಅಶ್ಲೀಲ ವಿಡಿಯೋಗಳನ್ನು ಲೀಕ್ ಮಾಡಿದ್ದ. ಇದ್ರಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 4 ವರ್ಷದ ಹಿಂದೆ ಮದುವೆಯಾದ ಈ ಜೋಡಿಗೆ 18 ತಿಂಗಳ ಮಗ ಕೂಡ ಇದ್ದಾನೆ. ಆದ್ರೆ 3 ತಿಂಗಳ ಹಿಂದೆ ಪತಿ ತ್ರಿವಳಿ ತಲಾಖ್ ನೀಡಿ, ಮಗುವನ್ನು ಕಿತ್ತುಕೊಂಡು ಆಕೆಯನ್ನು ತವರಿಗೆ ಕಳುಹಿಸಿದ್ದ. ಹೀಗಾಗಿ ಮಹಿಳೆ ಆಗಸ್ಟ್ 18ರಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಆದ್ರೆ ನಂತರದಲ್ಲಿ ಪತಿ ಆಕೆಯ ಅಶ್ಲೀಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ. ಸದ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು, ತನಿಖೆ ನಡೆಸ್ತಿದ್ದಾರೆ.

-masthmagaa.com

Contact Us for Advertisement

Leave a Reply