ಅವಳಿ ಮಕ್ಕಳಿಗೆ ಕೊರೋನಾ, ಕೋವಿಡ್ ಎಂದು ಹೆಸರಿಟ್ಟ ಪೋಷಕರು..!

masthmagaa.com:

ಚತ್ತೀಸ್​ಗಢ: ಕೊರೋನಾ ವೈರಸ್ ವಿಶ್ವದಲ್ಲಿ ಹಾವಳಿ ಇಡುತ್ತಿರುವ ಈ ಸಮಯದಲ್ಲಿ ನವಜಾತ ಶಿಶುಗಳಿಗೆ ಈ ವೈರಸ್ ಹೆಸರಿಡುವ ಸಂಪ್ರದಾಯ ಹುಟ್ಟಿಕೊಂಡಿದೆ. ಛತ್ತೀಸ್​​ಗಢದ ರಾಯ್​​ಪುರದಲ್ಲಿ ಇಬ್ಬರು ಅವಳಿ ಮಕ್ಕಳಿಗೆ ಕೋವಿಡ್ ಮತ್ತು ಕೊರೋನಾ ಎಂದು ಹೆಸರಿಡಲಾಗಿದೆ.

ಮಾರ್ಚ್​​26-27ರಂದು ರಾಯ್​ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳು ಜನಿಸಿದ್ದರು. ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿತ್ತು. ಅವರಲ್ಲಿ ಗಂಡು ಮಗುವಿಗೆ ಕೋವಿಡ್ ಎಂದು, ಹೆಣ್ಣು ಮಗುವಿಗೆ ಕೊರೋನಾ ಎಂದು ಹೆಸರಿಡಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮಕ್ಕಳ ಹೆಸರನ್ನು ಬದಲಿಸುತ್ತೇವೆ ಎಂದು ಪೋಷಕರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply