ಪತ್ತೆಆಯ್ತುಮತ್ತೊಂದು ದೊಡ್ಡವಜ್ರ ಎಲ್ಲಿ ಗೊತ್ತಾ?

masthmagaa.com:

ಆಫ್ರಿಕಾದ ದೇಶವಾದ ಬೋತ್ಸ್​​ವಾನಾಗೆ ಇತ್ತೀಚೆಗೆ ಅದೃಷ್ಟ ಖುಲಾಯಿಸಿದಂತಿದೆ. ಯಾಕಂದ್ರೆ ಕಳೆದ ತಿಂಗಳಷ್ಟೇ ಜಗತ್ತಿನ 3ನೇ ಅತಿದೊಡ್ಡ ವಜ್ರ ಪತ್ತೆಯಾಗಿದ್ದ ಬೋತ್ಸ್​​​​ವಾನಾದಲ್ಲೀಗ ಮತ್ತೆ ದೊಡ್ಡ ವಜ್ರ ಪತ್ತೆಯಾಗಿದೆ. ಕೆನಡಾದ ವಜ್ರದ ಸಂಸ್ಥೆ ಲುಕಾರಾ ಈ ವಜ್ರವನ್ನು ಜೂನ್ 12ರಂದು ಪತ್ತೆಹಚ್ಚಿದ್ದು, ಇದೀಗ ಕ್ಯಾಬಿನೆಟ್ ಮುಂದಿಟ್ಟಿದೆ. ಇದು ಗಾತ್ರದಲ್ಲಿ ವಿಶ್ವದ 3ನೇ ಅತಿದೊಡ್ಡ ವಜ್ರವಾಗಿದ್ದು, ಕಳೆದ ತಿಂಗಳು ಪತ್ತೆಯಾಗಿದ್ದ ವಜ್ರದ ಸ್ಥಾನವನ್ನು ಕಿತ್ತುಕೊಂಡಿದೆ. ಅಂದಹಾಗೆ 1905ರಲ್ಲಿ ಸೌತ್ ಆಫ್ರಿಕಾದಲ್ಲಿ 3,106 ಕ್ಯಾರೆಟ್​​ನ ವಜ್ರ ಪತ್ತೆಯಾಗಿತ್ತು. 2015ರಲ್ಲಿ ದೇ ಬೋತ್ಸ್​ವಾನಾದಲ್ಲಿ ವಿಶ್ವದ 2ನೇ ಅತಿದೊಡ್ಡ ವಜ್ರ ಪತ್ತೆಯಾಗಿತ್ತು. ಈ ಮೂಲಕ ವಿಶ್ವದ ಅತಿ ಹೆಚ್ಚು ವಜ್ರ ಪತ್ತೆಯಾಗುವ ರಾಷ್ಟ್ರಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ ಬೋತ್ಸ್​ವಾನಾ.

-masthmagaa.com

Contact Us for Advertisement

Leave a Reply