ವೀಕೆಂಡ್ ಕರ್ಫ್ಯೂ ಇಲ್ಲ! ನೈಟ್ ಕರ್ಫ್ಯೂ ಇದೆ! ಡೀಟೇಲ್ಸ್ ಇಲ್ಲಿದೆ…

masthmagaa.com:

ರಾಜ್ಯದ ಕೊರೋನಾ ಪರಿಸ್ಥಿತಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಮಹತ್ವದ ಸಭೆ ನಡೆಸಿದ್ರು. ಈ ಸಭೆಯಲ್ಲಿ ಬಹುನಿರೀಕ್ಷೆಯಂತೇ ವೀಕೆಂಡ್​ ಕರ್ಫ್ಯೂ ಅನ್ನ ರಾಜ್ಯಾದ್ಯಂತ ಕ್ಯಾನ್ಸಲ್​ ಮಾಡಲಾಗಿದೆ. ಉಳಿದಂತೆ ಸಭೆಯಲ್ಲಿ ಏನೆಲ್ಲಾ ನಿರ್ಧಾರಗಳನ್ನ ತೆಗೆದುಕೊಳ್ಳಲಾಯ್ತು ಅನ್ನೋದನ್ನ ನೋಡೋದಾದ್ರೆ..

– ರಾಜ್ಯಾದ್ಯಂತ ಶನಿವಾರ, ಭಾನುವಾರ ಇದ್ದ ವೀಕೆಂಡ್​ ಕರ್ಫ್ಯೂ ತಕ್ಷಣದಿಂದಲೇ ರದ್ದು.
– ಆಸ್ಪತ್ರೆಗೆ ದಾಖಲಾಗೋರ ಸಂಖ್ಯೆ ಸದ್ಯ 5 ಪರ್ಸೆಂಟ್​ ಇದೆ. ಅದೇನಾದ್ರೂ ಜಾಸ್ತಿಯಾದ್ರೆ ಮತ್ತೆ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲು ನಿರ್ಧಾರ.
– ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಈಗಿರೋ ನೈಟ್​​ ಕರ್ಫ್ಯೂ ರಾಜ್ಯಾದ್ಯಂತ ಮುಂದುವರಿಕೆ.
– ಮದುವೆ, ಸಭೆ, ಸಮಾರಂಭ, ಪ್ರತಿಭಟನೆ ಮುಂತಾದವುಗಳಿಗೆ ಈಗಿರೋ ನಿರ್ಬಂಧಗಳು ಮುಂದುವರಿಯಲಿವೆ. ಉದಾಹರಣೆಗೆ ಹೊರಾಂಗಣ ಮದುವೆಗಳಿಗೆ 200, ಒಳಾಂಗಣ ಮದುವೆಗಳಿಗೆ 100 ಜನ ಸೇರಬಹುದು. ಜೊತೆಗೆ ಹೋಟೆಲ್​, ರೆಸ್ಟೋರೆಂಟ್​, ಪಬ್, ಥಿಯೇಟರ್​ ಮುಂತಾದಕಡೆ 50-50 ರೂಲ್ಸ್. ಎರಡೂ ಡೋಸ್​ ಲಸಿಕೆ ಪಡೆದವರಿಗೆ ಮಾತ್ರ ಇಲ್ಲೆಲ್ಲಾ ಅವಕಾಶ ಅನ್ನೋ ನಿರ್ಬಂಧಗಳು​ ಮುಂದುವರಿಯುತ್ತೆ.
– ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ಶಾಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಕಮ್ಮಿ ಇದ್ರೆ 3 ದಿನ ಶಾಲೆ ಬಂದ್​. ಪಾಸಿಟಿವಿಟಿ ಜಾಸ್ತಿ ಇದ್ರೆ 7 ದಿನ ಶಾಲೆ ಬಂದ್​. ಅಸಿಸ್ಟೆಂಟ್​ ಕಮಿಷನರ್​, ತಹಶೀಲ್ದಾರ್​, ಟಿಹೆಚ್​​ಒ, ಬಿಇಒಗಳ ಸಲಹೆ ಪಡೆದು ಶಾಲೆಯನ್ನ ಬಂದ್​ ಮಾಡಬೇಕೋ, ಬೇಡವೋ ಅನ್ನೋದನ್ನ ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸ್ತಾರೆ.
– ಇನ್ಮುಂದೆ ಯಾವುದಾದ್ರೂ ಜಿಲ್ಲೆಯ ಶಾಲೆಗಳಲ್ಲಿ ಕೊರೋನಾ ಹೆಚ್ಚಾಯ್ತು ಅಂದ್ರೆ ಜಿಲ್ಲೆಯಲ್ಲಿ ಬರುವ ಎಲ್ಲಾ ಶಾಲೆಗಳನ್ನ ಬಂದ್ ಮಾಡಲ್ಲ. ಬದಲಾಗಿ ಯಾವ ಶಾಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಿದಿಯೋ ಆ ಶಾಲೆಯನ್ನ ಮಾತ್ರ ಬಂದ್​ ಮಾಡುವ ನಿರ್ಧಾರವನ್ನ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳುತ್ತಾರೆ.
– ಬೆಂಗಳೂರಿನ ಶಾಲೆಗಳಿಗೆ ಈಗಿರುವಂತೆ ಜನವರಿ 29ರವರೆಗೆ ರಜೆ ಮುಂದುವರಿಕೆ. ಜನವರಿ 29ಕ್ಕೆ ಮತ್ತೊಮ್ಮೆ ಸಭೆ ನಡೆಸಿ ಶಾಲೆ ಓಪನ್​ ಬಗ್ಗೆ ನಿರ್ಧಾರ.

-masthmagaa.com

 

Contact Us for Advertisement

Leave a Reply